Breaking News

ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹ – ನವದಂಪತಿ ಆತ್ಮಹತ್ಯೆ

Spread the love

ಮೈಸೂರು: ಪೋಷಕರ ವಿರೋಧದ ನಡೆವೆಯೂ ಪ್ರೇಮ ವಿವಾಹವಾದ ನವದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ.

ಇಬ್ಬರೂ ಅನ್ಯ ಜಾತಿಗೆ ಸೇರಿದ ಹಿನ್ನೆಲೆ ಪೋಷಕರ ಈ ಜೋಡಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಈ 4 ತಿಂಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿ ವಿವಾಹವಾಗಿದ್ದರು. ಮದುವೆಯಾಗಿ ಕೇವಲ ನಾಲ್ಕು ತಿಂಗಳಿಗೆ ಈ ನವಜೋಡಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಹುಣಸೂರು ತಾಲೂಕಿನ ಸಿಂಗರಮಾರನಹಳ್ಳಿಯಲ್ಲಿ ನಡೆದಿದೆ.

ಮದ ರಾಕೇಶ್(25), ಅರ್ಚನಾ(20)ಮೃತ ಪ್ರೇಮಿಗಳು. ರಾಕೇಶ್ ಮತ್ತು ಅರ್ಚನಾ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಬ್ಬರೂ ಒಂದೇ ಊರಿನ ಅಕ್ಕಪಕ್ಕದ ಮನೆಯವರು. ಪೋಷಕರು ವಿರೋಧ ಇದ್ದ ಹಿನ್ನೆಲೆ ಪ್ರೇಮಿಗಳು ನಾಲ್ಕು ತಿಂಗಳ ಹಿಂದೆ ಓಡಿ ಹೋಗಿ ಮದುವೆಯಾಗಿದ್ದರು.

10,000+ Free Couples & Love Images

ತಡರಾತ್ರಿ ಗ್ರಾಮಕ್ಕೆ ಬಂದು ಊರ ಹೊರವಲಯದಲ್ಲಿ ಮರಕ್ಕೆ ನವದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಅನ್ಯ ಜಾತಿಗೆ ಸೇರಿದ ಹಿನ್ನೆಲೆ ಪೋಷಕರ ವಿರೋಧವಿತ್ತು. ಆದರೂ ಇಬ್ಬರು ಮದುವೆಯಾಗಿದ್ದು, ಈ ದುಸ್ಥಿತಿ ಬಂದಿರುವುದು ವಿಪರ್ಯಾಸವಾಗಿದೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ