ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ‘ಕೆಜಿಎಫ್ 2’ ಬಿಡುಗಡೆಗೆ ಯಶ್ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಈಗಾಗಲೇ ಸಿನಿಮಾ ಏಪ್ರಿಲ್ 14ರಂದು ಬಿಡುಗಡೆ ಎಂದು ಟೀಮ್ ಅನೌನ್ಸ್ ಮಾಡಿದೆ. ಆದರೆ, ಇನ್ನೂ ಅಭಿಮಾನಿಗಳಿಗೆ ನಂಬಿಕೆಯೇ ಬರುತ್ತಿಲ್ಲ.
ಮತ್ತೆ ‘ಕೆಜಿಎಫ್ 2’ ಪೋಸ್ಟ್ ಪೋನ್ ಆಗುತ್ತಾ? ಅನ್ನುವ ಗೊಂದಲದಲ್ಲಿ ಇದ್ದಾರೆ. ಇದಕ್ಕೆ ಕಾರಣ ಇನ್ನೂ ಚಿತ್ರತಂಡ ಒಂದೇ ಒಂದು ಅಪ್‌ಡೇಟ್ ಕೊಟ್ಟಿ,ಲ್ಲ.
‘ಕೆಜಿಎಫ್ 2’ ಟೀಸರ್ ಬಿಟ್ಟರೆ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು ಬಿಟ್ಟರೆ, ಟ್ರೈಲರ್, ಸಾಂಗ್ ಬಗ್ಗೆ ಸುದ್ದಿನೇ ಇಲ್ಲ. ಈ ಮಧ್ಯೆ ರೀ-ಶೂಟ್ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿರುವ ವಿಚಾರ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಈ ಮಧ್ಯೆ ಸ್ವತ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಕೆಜಿಎಫ್ 2’ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್‌ಗೆ ಪತ್ರ ಬರೆದಿರುವ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಸಲಿಗೆ ಮೋದಿ ಬರೆದ ಪತ್ರ ಗುಟ್ಟೇನು ಅನ್ನುವುದನ್ನು ನೋಡಿ.
ವಿಜಯ್ ಕಿರಗಂದೂರ್ ಮೋದಿ ಪತ್ರ
ಇಂದು (ಫೆ 22) ಸಂಜೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಕೆಜಿಎಫ್ 2’ ಚಿತ್ರದ ನಿರ್ಮಾಪಕರಿಗೆ ಬರೆದ ಪತ್ರವೊಂದು ಹರಿದಾಡುತ್ತಿದೆ. ಈ ಪತ್ರವನ್ನು ಪ್ರಧಾನ ಮಂತ್ರಿ ಕಾರ್ಯಾಲಯದಿಂದಲೇ ಹೊರಡಿಸಿತ್ತು. ಸ್ವತ: ನರೇಂದ್ರ ಮೋದಿಯೇ ಈ ಪತ್ರದಲ್ಲಿ ‘ಕೆಜಿಎಫ್ 2’ ಸಿನಿಮಾ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಬಳಿ ಅಪ್‌ಡೇಟ್ ಕೇಳಿದ್ದರು. ಇದೇ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಹೊಂಬಾಳೆ ಫಿಲಂಸ್ ಈ ಪತ್ರವನ್ನು ಶೇರ್ ಮಾಡಿಕೊಂಡಿದೆ.
ಮೋದಿ ಬರೆದ ಪತ್ರದಲ್ಲಿ ಏನಿದೆ?
ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದಲ್ಲಿ ‘ಕೆಜಿಎಫ್ 2’ ಸಿನಿಮಾ ಬಗ್ಗೆ ಅವರೂ ಕಾತುರರಾಗಿದ್ದು, ಸಿನಿಮಾ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ. “1.3 ಬಿಲಿಯನ್ ಭಾರತೀಯರ ಪರವಾಗಿ, ನನ್ನ ಜವಾಬ್ದಾರಿಯಿಂದ ಕೇಳುತ್ತಿದ್ದೇನೆ. ‘ಕೆಜಿಎಫ್ 2’ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿಯನ್ನು ನೀಡಬೇಕೆಂದು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಬಳಿ ಕೇಳಿಕೊಳ್ಳುತ್ತೇನೆ. ” ಎಂಬರ್ಥದಲ್ಲಿ ಬರೆಯಾಗಿದೆ. ಈ ಪತ್ರವನ್ನು ಹೊಂಬಾಳೆ ಫಿಲಂಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.