Breaking News

ಮಾತಿನ ಮಲ್ಲಿ ಆರ್ ಜೆ ರಚನಾ ಹೃದಯಾಘಾತದಿಂದ ನಿಧನ

Spread the love

ಬೆಂಗಳೂರು: ಮಾತಿನ ಮಲ್ಲಿಯಾಗಿ ಅಪಾರ ಕೇಳುಗರ ಪ್ರೀತಿ ಪ್ರೋತ್ಸಾಹವನ್ನು ಪಡೆದುಕೊಂಡಿದ್ದ ಆರ್ ಜೆ ರಚನಾ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಜೆ.ಪಿ ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ ಎನ್ನಲಾಗಿದೆ.

ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ನಿಧನರಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು.

ರಕ್ಷಿತ್ ಶೆಟ್ಟಿಯವರ ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿ’ ಚಿತ್ರದಲ್ಲಿ ಸಹೋದರಿ ಪಾತ್ರದ ಮೂಲಕ ರಚನಾ ಖ್ಯಾತಿಯಾಗಿದ್ದರು. ಮೂರು ವರ್ಷಗಳಿಂದ ರೇಡಿಯೋ ಜಾಕಿ ಕೆಲಸ ಬಿಟ್ಟಿದ್ದರು. ರೇಡಿಯೋ ಮಿರ್ಚಿಯಲ್ಲಿ ಅಪಾರ ಕೇಳುಗರನ್ನು ತನ್ನ ಮಾತಿನ ಮೂಲಕ ರಂಜಿಸಿದ ರಚನಾ ಅವರ ಹಠಾತ್ ನಿಧನ ಅಭಿಮಾನಿಗಳನ್ನು ಅಘಾತಕ್ಕೆ ದೂಡಿದೆ.

ರಚನಾ ಅವರ ಪೋಷಕರು ಚಾಮರಾಜಪೇಟೆಯಲ್ಲಿ ವಾಸವಿದ್ದು, ಮೃತದೇಹವನ್ನು ಪೋಷಕರ ನಿವಾಸಕ್ಕೆ ಕೊಂಡೊಯ್ಯಲಾಗಿದೆ.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ