ರೈಲ್ವೇ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಟಿಕೆಟ್ ಬುಕಿಂಗ್ ಮಾಡಲು ಹೊಸ ಯಾಪ್ ಒಂದನ್ನು ಪರಿಚಯಿಸಿದೆ. ಕನ್‍ಫರ್ಮ ಟಿಕೆಟ್ ಆಫ್‍ನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ವಿಶೇಷವಾಗಿ ತತ್ಕಾಲ್ ಬುಕಿಂಗ್‍ಗಾಗಿ ಈ ಕನ್‍ಫರ್ಮ ಟಿಕೆಟ್ ಆಫ್‍ನ್ನು ಪ್ರಾರಂಭಿಸಲಾಗಿದೆ. ತತ್ಕಾಲ್‍ನಲ್ಲಿ ಟಿಕೆಟ್ ಬುಕ್ ಮಾಡುವವರು ಈ ಆ್ಯಪ್ ಬಳಸಿ ತಮ್ಮ ಟಿಕೆಟ್ ಕನ್‍ಫರ್ಮ್ ಆಗಿದೆಯೇ..? ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಅಮರ್ ಉಜಾಲಾ ವರದಿಯ ಪ್ರಕಾರ, ಪ್ರಯಾಣಿಕರು ತಮ್ಮ ಮನೆಯಲ್ಲೇ ಕುಳಿತು ತುರ್ತು ತತ್ಕಾಲ್ ಟಿಕೆಟ್‍ಗಳನ್ನು ಬುಕ್ ಮಾಡಬಹುದು. ಕನ್ಫರ್ಮ್ ಟಿಕೆಟ್ ಅಪ್ಲಿಕೇಶನ್ ಪ್ರಯಾಣಿಕರಿಗೆ ವಿವಿಧ ರೈಲುಗಳ ಸೀಟ್ ಲಭ್ಯತೆಯನ್ನು ವೀಕ್ಷಿಸಲು ಸಹಾಯ ಮಾಡುತ್ತದೆ.
ಅಲ್ಲದೆ ನಿರ್ದಿಷ್ಟ ಮಾರ್ಗದಲ್ಲಿ ಲಭ್ಯವಿರುವ ಎಲ್ಲಾ ತತ್ಕಾಲ್ ಟಿಕೆಟ್‍ಗಳನ್ನು ಸಹ ಈ ಆ್ಯಪ್ ತೋರಿಸುತ್ತದೆ. ಈ ಅಪ್ಲಿಕೇಶನ್‍ನಲ್ಲಿ ವಿವರಗಳನ್ನು ಪಡೆಯಲು ಪ್ರಯಾಣಿಕರು ಇನ್ನು ಮುಂದೆ ರೈಲು ಸಂಖ್ಯೆಗಳನ್ನು ನಮೂದಿಸುವ ಅಗತ್ಯವಿಲ್ಲ.
ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‍ನಿಂದ ಅಪ್ಲಿಕೇಶನ್ ಡೌನ್‍ಲೋಡ್ ಮಾಡಬಹುದು.