Breaking News

ಮುಂಬೈನಲ್ಲಿ ಐಷಾರಾಮಿ ಫ್ಲಾಟ್ ಖರೀದಿಸಿದ ನಟಿ ಕಾಜೋಲ್​​..! ಈ ಬಂಗಲೆಯ ಬೆಲೆ ಎಷ್ಟು ಗೊತ್ತಾ.?

Spread the love

ಬಾಲಿವುಡ್​ ನಟಿ ಕಾಜೋಲ್​​ ಮುಂಬೈನಲ್ಲಿರುವ ತನ್ನ ಆಸ್ತಿಯ ಲಿಸ್ಟ್​ಗೆ ಮತ್ತೊಂದು ಅದ್ಧೂರಿ ಫ್ಲಾಟ್​ಗಳನ್ನು ಸೇರ್ಪಡೆ ಮಾಡಿದ್ದಾರೆ. ಜುಹುದಲ್ಲಿರುವ ಶಿವಶಕ್ತಿ ಬಂಗಲೆಯ ಮಾಲೀಕೆಯಾಗಿರುವ ಕಾಜೋಲ್​ ಇದೀಗ ಇದೇ ಬಂಗಲೆಯ ಸಮೀಪದಲ್ಲಿಯೇ ಮತ್ತೆರಡು ಫ್ಲಾಟ್​ಗಳನ್ನು ಖರೀದಿ ಮಾಡಿದ್ದಾರೆ.

 

ಈ ಅದ್ದೂರಿ ಅಪಾರ್ಟ್​ಮೆಂಟ್​ಗಳನ್ನು ಖರೀದಿಸಲು ನಟಿ ಕಾಜೋಲ್​ 11.95 ಕೋಟಿ ರೂಪಾಯಿಗಳನ್ನು ವ್ಯಯಿಸಿದ್ದಾರೆ ಎನ್ನಲಾಗಿದೆ. ಈ ಫ್ಲಾಟ್​ಗಳು ಕಟ್ಟಡದ 10ನೇ ಮಹಡಿಯಲ್ಲಿದೆ ಎನ್ನಲಾಗಿದೆ.

ನಟಿ ಕಾಜಲ್​ ಈ ಬಗ್ಗೆ ಯಾವುದೇ ಖಚಿತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ Squarefeatindia.com ನ ಸಂಸ್ಥಾಪಕ ವರುಣ್​ ಸಿಂಗ್​, ಕಾಜೋಲ್​​ರ ಫ್ಲಾಟ್​ಗಳ ಬಗ್ಗೆ ಕೆಲವು ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಫ್ಲಾಟ್​ಗಳು 10ನೇ ಮಹಡಿಯಲ್ಲಿದ್ದು ಅಪಾರ್ಟ್​ಮೆಂಟ್​ಗಳ ಒಟ್ಟು ವೆಚ್ಚ 11.95 ಕೋಟಿ ರೂಪಾಯಿಗಳು ಎಂದು ಹೇಳಿದ್ದಾರೆ.

ಎರಡೂ ಫ್ಲಾಟ್​ಗಳ ಕಾರ್ಪೆಟ್​ ಪ್ರದೇಶವು ಸುಮಾರು 200 ಚದರ ಅಡಿ ಹೊಂದಿದೆ. ಕುತೂಹಲಕಾರಿ ವಿಚಾರವೆಂದರೆ ಕಾಜೋಲ್​ ಖರೀದಿಸಿರುವ ಫ್ಲಾಟ್​​ಗಳು ಅವರ ಪ್ರಸ್ತುತ ಬಂಗಲೆ ಇರುವ ರಸ್ತೆಯಲ್ಲಿಯೇ ಇದೆ.

ವೆಬ್‌ಸೈಟ್‌ನ ಪ್ರಕಾರ, ಎರಡೂ ಫ್ಲ್ಯಾಟ್‌ಗಳ ಕಾರ್ಪೆಟ್ ಪ್ರದೇಶವು ಸುಮಾರು 2,000 ಚದರ ಅಡಿ ಮತ್ತು ಡೀಲ್‌ಗಳನ್ನು ಜನವರಿ 2022 ರಲ್ಲಿ ನೋಂದಾಯಿಸಲಾಗಿದೆ.

ಒಂದು ಕುತೂಹಲಕಾರಿ ಸಂಗತಿಯೆಂದರೆ ಕಾಜೋಲ್ ಫ್ಲಾಟ್‌ಗಳನ್ನು ಖರೀದಿಸಿರುವ ಕಟ್ಟಡವು ಅವರ ಪ್ರಸ್ತುತ ಬಂಗಲೆಯ ಅದೇ ರಸ್ತೆಯಲ್ಲಿದೆ. ಕಾಜೋಲ್ ವಿಶಾಲ್ ದೇವಗನ್ ಅವರು ಟ್ರೈಕ್ಷಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ದಾಖಲೆಗಳು ಬಹಿರಂಗಪಡಿಸುತ್ತಿವೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ