ರಾಮನಗರ: ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದನ್ನು ಇವರಿಂದ ನಾನು ಕಲಿಯಬೇಕಾ ಎಂದು ಪ್ರಶ್ನಿಸುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮ್ಯರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಚನ್ನಪಟ್ಟಣದ ತಗಚಗೆರೆ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದನ್ನು ಇವರಿಂದ ನಾನು ಕಲಿಯಬೇಕಾ? ಶ್ರೀನಗರದಲ್ಲಿ ಬಾವುಟ ಹಾರಿಸಲು ಹೋಗಿ 12 ಜನರನ್ನು ಸಾಯಿಸಿದ್ದರು. ಬಿಜೆಪಿಯವರ ಕೈಯಲ್ಲಿ ಉಗಿಸಿಕೊಳ್ಳುತ್ತಿದ್ದರು. ಆಗ ರಾಷ್ಟ್ರಧ್ವಜ ಕಾಣಲಿಲ್ವ. ರಾಜ್ಯದ ಜನರ ಬಗ್ಗೆ ನಾವು ಎಲ್ಲಿ ಚರ್ಚೆ ಮಾಡುವುದು? ರೈತರ ಸಮಸ್ಯೆಗಳ ಬಗ್ಗೆ ಎಲ್ಲಿ ಚರ್ಚೆ ಮಾಡುವುದು? ರಾಷ್ಟ್ರಧ್ವಜದ ಬಗ್ಗೆ ಇವರೊಬ್ಬರೇ ಗೌರವವಿಟ್ಟಿಲ್ಲ. ಅದಕ್ಕೆ ಹೇಳಿದ್ದೇನೆ ಬೀದಿಲಿ ಹೋರಾಟ ಮಾಡಿ, ಸದನ ಮುಂದೂಡಿ. ಇಲ್ಲ ಅಮಾನತ್ತು ಮಾಡಿ. ಪ್ರತಿನಿತ್ಯ ಒಂದೂವರೆ ಕೋಟಿ ರಾಜ್ಯದ ಜನರ ಹಣ ಸದನಕ್ಕಾಗಿ ಖರ್ಚಾಗುತ್ತಿದೆ. ಆದರೆ ಅದನ್ನು ಇವರು ವ್ಯರ್ಥ ಮಾಡುತ್ತಿದ್ದಾರೆ. ಇದು ನೀವು ದೇಶ ಕಟ್ಟೋರಾ. ಅದನ್ನು ನಾನು ಕಾಂಗ್ರೆಸ್ ನಾಯಕರಿಗೆ ಕೇಳುತ್ತೇನೆ ಎಂದಿದ್ದಾರೆ.