ಕಾರವಾರ: ಕಾಳಿನದಿಯಲ್ಲಿ ನೀರು ಕುಡಿಯಲು ಬಂದ ಜಿಂಕೆವೊಂದನ್ನು ಮೊಸಳೆ ದಾಳಿ ಮಾಡಿ ಎಳೆದುಕೊಂಡು ಹೋದ ಘಟನೆ ದಾಂಡೇಲಿಯ ಪಟೇಲ ನಗರದ ಬಳಿಯ ಕಾಳಿ ನದಿಯಲ್ಲಿ ನಡೆದಿದೆ.
ಶುಕ್ರವಾರ ಸಂಜೆ ದಾಹ ತೀರಿಸಿಕೊಳ್ಳಲು ಕಾಳಿನದಿಗೆ ಜಿಂಕೆಯೊಂದು ಇಳಿದಿದೆ. ನದಿಯಲ್ಲಿ ಈಜುತ್ತಾ ಮತ್ತೊಂದು ದಡಕ್ಕೆ ತೆರಳುತ್ತಿದ್ದ ಜಿಂಕೆ ಮೇಲೆ ಮೊಸಳೆ ದಾಳಿ ಮಾಡಿ ಎಳೆದೊಯ್ದಿದೆ.
ಘಟನೆ ನಡೆದ ಸ್ಥಳದಲ್ಲಿದ್ದ ಸ್ಥಳೀಯರು ಜಿಂಕೆಯನ್ನು ಕಾಪಾಡಲು ಎಷ್ಟೇ ಆರ್ಭಟಿಸಿದರು, ಕೂಗಾಡಿದರು ಫಲಕಾರಿಯಾಗಲಿಲ್ಲ. ಇತ್ತಿಚೇಗೆ ಇದೇ ಭಾಗದಲ್ಲಿ ಯುವಕನೊಬ್ಬನನ್ನು ಮೊಸಳೆ ನೀರಿನಲ್ಲಿ ಎಳೆದುಕೊಂಡು ಹೋಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿರುವುದು ಇಲ್ಲಿರುವ ಜನರಲ್ಲಿ ಆತಂಕ ಹೆಚ್ಚಿಸಿದೆ.
Laxmi News 24×7