Breaking News

ಇದಪ್ಪಾ ಸುದ್ದಿ: ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಸಾಲ ಪಡೆದ ಭೂಪ!

Spread the love

ನವದೆಹಲಿ, ಫೆಬ್ರವರಿ 17: ನೀಲಿ ಸಿನಿಮಾಗಳಲ್ಲೇ ಸಖತ್ ಸದ್ದು ಮಾಡುತ್ತಾ ಬಾಲಿವುಡ್ ಅಂಗಳಕ್ಕೆ ಲಗ್ಗೆಯಿಟ್ಟ ಸ್ಟಾರ್ ನಟಿ ಸನ್ನಿ ಲಿಯೋನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಂಥ ಸ್ಟಾರ್ ನಟಿಯ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡು ವ್ಯಕ್ತಿಯೊಬ್ಬ ಎರಡು ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದಾನೆ.

ಈ ಕುರಿತು ಸ್ವತಃ ನಟಿ ಸನ್ನಿ ಲಿಯೋನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

“ನನಗೇ ಈ ರೀತಿ ಆಗಿ ಬಿಟ್ಟಿದೆ. ಹುಚ್ಚರು. ಕೆಲವು ಮೂರ್ಖರು 2000 ರೂಪಾಯಿ ಸಾಲವನ್ನು ತೆಗೆದುಕೊಳ್ಳಲು ನನ್ನ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡಿದ್ದಾರೆ. ಇದರಿಂದ ನನ್ನ CIBIL ಸ್ಕೋರ್ (SIC) ಅನ್ನು FCK ಮಾಡಿದ್ದಾರೆ”, ಎಂದು ಸನ್ನಿ ಲಿಯೋನ್ ತಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉಲ್ಲೇಖಿಸಿದ್ದಾರೆ.

 

ಸ್ಟಾರ್ ನಟ ಮತ್ತು ನಟಿಯರು ತಮ್ಮ ಆಪ್ತರ ಅಂತಾ ಹೇಳಿಕೊಂಡು ವಂಚಿಸುತ್ತಿದ್ದ ಕಾಲ ಹೋಗಿದೆ. ಆನ್ ಲೈನ್ ಮೂಲಕವೇ ಬ್ಯಾಂಕ್ ಖಾತೆಗೆ ಕನ್ನ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಇಂಥವರ ಮಧ್ಯೆ ಇಲ್ಲೊಬ್ಬ ಭೂಪ ಡಿಫರೆಂಟ್ ಆಗಿ ಸುದ್ದಿ ಆಗಿದ್ದಾರೆ. ಜಸ್ಟ್ 2000 ರೂಪಾಯಿ ಸಾಲ ಪಡೆಯುವುದಕ್ಕೆ ಸನ್ನಿ ಲಿಯೋನ್ ಹೆಸರನ್ನು ಬಳಸಿಕೊಂಡಿದ್ದಾನೆ.

ಧಣಿ ಸ್ಟಾಕ್ಸ್ ಲಿಮಿಟೆಡ್ ಮೂಲಕ ಸಾಲ:

ಬಾಲಿವುಡ್ ನಟಿ ಸನ್ನಿ ಲಿಯೋನ್ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡಿರುವ ಆರೋಪಿ ಧಣಿ ಸ್ಟಾಕ್ಸ್ ಲಿಮಿಟೆಡ್ ಎಂಬ ಫೈನ್ಯಾನ್ಸ್ ಸಂಸ್ಥೆಯ ಮೂಲಕ 2 ಸಾವಿರ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದಾನೆ. ಈ ಕುರಿತು ವಂಚನೆ ನಡೆದಿರುವ ಬಗ್ಗೆ ನಟಿಯು ಟ್ವೀಟ್ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಸ್ಥೆಯು ಸಮಸ್ಯೆಯನ್ನು ಬಗೆಹರಿಸಿದೆ. ಈ ಕುರಿತು ಸಂಸ್ಥೆಗೆ ಸನ್ನಿ ಲಿಯೋನ್ ಧನ್ಯವಾದ ತಿಳಿಸಿದ್ದಾರೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ