Breaking News

ಹಿಜಾಬ್ ಗಲಾಟೆ ನಡೆದ ಶಾಲೆಯಲ್ಲಿ ಮಕ್ಕಳಿಗೆ ಡಿಸಿ, ಎಸ್ ಪಿಯಿಂದ ಗಣಿತ ಪಾಠ

Spread the love

ಚಿಕ್ಕಮಗಳೂರು :ಚಿಕ್ಕಮಗಳೂರು ತಾಲೂಕಿನ ಇಂದಾವರ ಶಾಲೆಯಲ್ಲಿ ಹಿಜಾಬ್​​ಗಾಗಿ ಗಲಾಟೆ ನಡೆದಿತ್ತು. ಶಾಲೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಭೇಟಿ ನೀಡಿ, ಶಾಲಾ ಮಕ್ಕಳಿಗೆ ಪಾಠ ಮಾಡಿರುವ ಘಟನೆ ನಡೆದಿದೆ.

ಶಾಲೆಯ ಎಲ್ಲ ಮಕ್ಕಳಿಗೆ ಡಿಸಿ, ಎಸ್ಪಿ, ಸಿಇಓ ಪಾಠ ಮಾಡಿದ್ದಾರೆ. ಡಿಸಿ-ಎಸ್ಪಿ ಮಕ್ಕಳಿಗೆ ಗಣಿತ ಪಾಠ ಮಾಡಿದರೆ, ಜಿಲ್ಲಾ ಪಂಚಾಯಿತಿಯ ಸಿಇಒ ಸಮಾಜ ವಿಜ್ಞಾನ ಪಾಠ ಮಾಡಿದ್ದಾರೆ. ನಿನ್ನೆ ಪೋಷಕರು – ಮಕ್ಕಳು ಶಾಲೆ ಬಳಿ ಗಲಾಟೆ ಮಾಡಿದ್ದರು. ಹಿಗಾಗಿ ಡಿಡಿಪಿಐ ಮಲ್ಲೇಶಪ್ಪ ಶಾಲೆಗೆ ತುರ್ತು ರಜೆ ನೀಡಿದ್ದರು. ಇಂದು ಅದೇ ಶಾಲೆಗೆ ಡಿಸಿ, ಎಸ್ಪಿ, ಸಿಇಓ ಭೇಟಿ ನೀಡಿ ಮಕ್ಕಳಿಗೆ ಪಾಠ ಮಾಡಿದ್ದು ವಿಶೇಷವಾಗಿತ್ತು.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ