Breaking News

ವೈಯಕ್ತಿಕ, ಕೈಗಾರಿಕೆ ಸಾಲದ ಹೆಚ್ಚಳದ ಸಂತಸ.. ಚಿನ್ನದ ಮೇಲಿನ ಸಾಲ ಏರಿಕೆಯ ಹಿನ್ನಡೆ: ಹಣಕಾಸು ಇಲಾಖೆ ವರದಿ

Spread the love

ನವದೆಹಲಿ: ಗ್ರಾಹಕರು ಮತ್ತು ಉದ್ಯಮಿಗಳು ಹೆಚ್ಚಿನ ಸಾಲವನ್ನು ಪಡೆದುಕೊಳ್ಳುತ್ತಿರುವುದು ಆರ್ಥಿಕ ಚಟುವಟಿಕೆಯ ಸುಧಾರಣೆಯ ಸಂಕೇತವಾಗಿದೆ. ಕಳೆದ ವರ್ಷದ ಡಿಸೆಂಬರ್​ ತಿಂಗಳಲ್ಲಿ ವೈಯಕ್ತಿಕ ಮತ್ತು ಕೈಗಾರಿಕಾ ಸಾಲಗಳ ಬೆಳವಣಿಗೆ ದರ ಹೆಚ್ಚಾಗಿದೆ. ಆದರೆ, ಈ ಮಧ್ಯೆಯೇ ಚಿನ್ನದ ಮೇಲಿನ ಸಾಲವೂ ಕೂಡ ಏರುತ್ತಿರುವುದು ಆರ್ಥಿಕ ಕೊರತೆ ಮತ್ತು ನಗದು ಹರಿವಿನ ಸಮಸ್ಯೆಯನ್ನು ಇದು ದೃಢೀಕರಿಸುತ್ತದೆ ಎಂದು ಹಣಕಾಸು ಇಲಾಖೆಯ ವರದಿ ತಿಳಿಸಿದೆ.

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಉಂಟಾದ ಪ್ರತಿಕೂಲ ಪರಿಣಾಮದಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೀಡಾಗಿ ಚಿನ್ನಾಭರಣವನ್ನು ಅಡಮಾನ ಇಟ್ಟು ಅದರ ಮೇಲೆ ಸಾಲವನ್ನು ಪಡೆಯುತ್ತಿರುವುದು ಆರ್ಥಿಕ ಚೇತರಿಕೆಗೆ ಅಲ್ಪ ಹಿನ್ನಡೆ ಉಂಟು ಮಾಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಈ ಬಗ್ಗೆ ಇಲಾಖೆ ಹಂಚಿಕೊಂಡ ಅಧಿಕೃತ ಮಾಹಿತಿಯ ಪ್ರಕಾರ, 2021 ರ ಡಿಸೆಂಬರ್​ ತಿಂಗಳಲ್ಲಿ ವೈಯಕ್ತಿಕ ಸಾಲಗಳ ಪ್ರಮಾಣ ಶೇ.14.3 ರಷ್ಟು ದಾಖಲಾದರೆ, ಕೈಗಾರಿಕಾ ಸಾಲಗಳು ಶೇ.7.6 ರಷ್ಟು ಹೆಚ್ಚಾಗಿವೆ. ಇದರಲ್ಲಿ ಮಧ್ಯಮ ಕೈಗಾರಿಕೆ, ಸಣ್ಣ ಮತ್ತು ಅತಿಸಣ್ಣ(MSME) ಕೈಗಾರಿಕೆಗಳ ಸಾಲದ ಪ್ರಮಾಣ ಬೇರೆ ಬೇರೆಯಾಗಿದೆ. ಇದರಲ್ಲಿ ಸಣ್ಣ, ಅತಿ ಸಣ್ಣ ಕೈಗಾರಿಕೆಗಳ ಸಾಲ ಪಡೆಯುವ ಪ್ರಮಾಣಕ್ಕೆ ಹೋಲಿಸಿದರೆ ಮಧ್ಯಮ ಕೈಗಾರಿಕೆಗಳಿಗೆ ಸಾಲ ಪಡೆಯುವ ಪ್ರಮಾಣ ಹೆಚ್ಚಿದೆ.

ಳೆದ ವರ್ಷದ ಇದೇ ಅವಧಿಗೆ ಮಧ್ಯಮ ಕೈಗಾರಿಕೆಗಳ ಆರಂಭಕ್ಕೆ 86.5 ಪ್ರತಿಶತ ಸಾಲ ಪಡೆದರೆ, ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗಾಗಿ ಶೇಕಡಾ 20.5 ರಷ್ಟು ಸಾಲ ಪಡೆಯಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಇದಲ್ಲದೇ, ಬುಧವಾರ ಬಿಡುಗಡೆಯಾದ ಈ ವರ್ಷದ ಜನವರಿ ತಿಂಗಳ ಆರ್ಥಿಕ ವರದಿಯಲ್ಲಿ ವೈಯಕ್ತಿಕ ಸಾಲಗಳ ಪಡೆಯುವಿಕೆಯು ಹೆಚ್ಚಳವಾಗಿದೆ. ಗ್ರಾಹಕರು ಪಡೆಯುವ ಬೆಲೆಬಾಳುವ ವಸ್ತುಗಳ ಮೇಲಿನ ಸಾಲ, ಚಿನ್ನದ ಮೇಲಿನ ಸಾಲ, ಮತ್ತು ಇತರ ಸಾಲಗಳು ಕೂಡ ಹೆಚ್ಚಳವಾಗಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ