Breaking News

ಕಸ ಹಾಕೋ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ

Spread the love

ಬೆಂಗಳೂರು: ಕಸ ಹಾಕುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನನಾಯಕನ ಪಾಳ್ಯದಲ್ಲಿ ನಡೆದಿದೆ.

ನಿವೃತ್ತ ಎಎಸ್‍ಐ ಜವರೇಗೌಡ, ಮಕ್ಕಳಾದ ಆನಂದ್ ಪಾಪು, ಮಗಳು ಕೋಮಲ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಅನಿತಾ ಹಾಗೂ ಕುಟುಂಬಸ್ಥರ ಮೇಲೆ ಜವರೇಗೌಡ ಫ್ಯಾಮಿಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಚನ್ನನಾಯಕನ ಹಳ್ಳಿಯಲ್ಲಿ ಅನಿತಾ ಅವರು ಗಾರ್ಮೆಂಟ್ಸ್ ಹೊಂದಿದ್ದು, ಕಳೆದ ಮೂರುವರೆ ವರ್ಷದ ಹಿಂದೆ ಗಾರ್ಮೆಂಟ್ಸ್ ಆರಂಭವಾಗಿತ್ತು. ರೆಸಿಡೆನ್ಷಿಯಲ್ ಏರಿಯಾದಲ್ಲಿ ಗಾರ್ಮೆಂಟ್ಸ್ ಹೊಂದಿದ್ದರಿಂದ ಜವರೇಗೌಡ ಪ್ರಶ್ನಿಸಿದ್ದರು. ಹಾಗಾಗಿ ಇತ್ತೀಚೆಗೆ ಗಾರ್ಮೆಂಟ್ಸ್ ಶಿಫ್ಟ್ ಮಾಡಲು ಅನಿತಾ ಅವರು ಸಿದ್ಧತೆ ನಡೆಸುತ್ತಿದ್ದರಂತೆ. ಅಲ್ಲದೇ ಎಎಸ್‍ಐ ಮನೆ ಹಿಂದೆ ಖಾಲಿ ಜಾಗ ಕೂಡ ಇದ್ದು, ಆ ಖಾಲಿ ಜಾಗದಲ್ಲಿ ಸ್ಥಳೀಯರು ಕಸ ತಂದು ಹಾಕುತ್ತಿದ್ದರು. ಗಾರ್ಮೆಂಟ್ಸ್ ಆರಂಭವಾದ ಮೇಲೆ ಆ ಖಾಲಿ ಜಾಗಕ್ಕೆ ಜನ ಬಂದು ಕಸ ಹಾಕುತ್ತಿದ್ದಾರೆಂದು ಕೋಪಗೊಂಡು ಎಎಸ್‍ಐ ಕುಟುಂಬ ಮತ್ತು ಅನಿತಾ ಕುಟುಂಬದ ನಡುವೆ ಆಗಾಗ ಜಗಳವಾಗುತ್ತಿತ್ತು.ಕಳೆದ ಗುರವಾರ ಅನಿತಾ ಕುಟುಂಬ ಮಂತ್ರಾಲಯಕ್ಕೆ ತೆರಳಿದ್ದ ವೇಳೆ ಶುಕ್ರವಾರ ಬೆಳಗ್ಗೆ ಲಕ್ಷ್ಮಮ್ಮ ನಿಂಬೆಹಣ್ಣು ಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


Spread the love

About Laxminews 24x7

Check Also

ನಿಧಿಯಾಸೆಗೆ ದೇವರ ಕಲ್ಲನ್ನು ಕೆಡವಿದ್ದ ಕಳ್ಳರನ್ನು ಬಂಧಿಸಿದ ಪೊಲೀಸರು: ಮೂಕಪ್ಪಸ್ವಾಮಿ ಪವಾಡ ಎಂದ ಗ್ರಾಮಸ್ಥರು

Spread the loveಹಾವೇರಿ: 4 ತಿಂಗಳ ಹಿಂದೆ ನಿಧಿ ಆಸೆಗಾಗಿ ಕೋಣಕಲ್ಲು ಭರಮಪ್ಪ ದೇವರ ಕಲ್ಲನ್ನು ಕೆಡವಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ