Breaking News

ರೈಲ್ವೆ ಬೈಸಿಕಲ್- ಇಂಡಿಯನ್ ರೈಲ್ವೆ ನೂತನ ಆವಿಷ್ಕಾರ

Spread the love

ನವದೆಹಲಿ: ಇಂಡಿಯನ್ ರೈಲ್ವೆ ಹೊಸ ರೈಲ್ವೆ ಬೈಸಿಕಲ್‍ನ್ನು ಆವಿಷ್ಕಾರಿಸಿದ್ದು, ರೈಲ್ವೆ ಟ್ರ್ಯಾಕ್ ಪರಿಶೀಲನೆ ಹಾಗೂ ರಿಪೇರಿ ಮಾಡುವ ಸಂದರ್ಭದಲ್ಲಿ ಸಿಬ್ಬಂದಿಗೆ ಸಹಕಾರಿ ಆಗಲಿದೆ. ಈ ಕುರಿತ ವಿಡಿಯೋವನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಜುಲೈನಲ್ಲಿ ಮಾಹಿತಿ ನೀಡಿ ಟ್ವೀಟ್ ಮಾಡಿದ್ದರು.

ನೂತನವಾಗಿ ಅವಿಷ್ಕಾರಿಸಿರುವ ರೈಲ್ವೆ ಸೈಕಲ್ ಗಂಟೆಗೆ ಗರಿಷ್ಠ 15 ಕಿಮೀ ವೇಗದಲ್ಲಿ ತುಳಿಯಬಹುದಾಗಿದೆ. ಈಸ್ಟ್ ಕೋಸ್ಟ್ ರೈಲ್ವೆ ವಿಭಾಗ ಈ ರೈಲ್ವೆ ಸೈಕಲ್‍ಗಳನ್ನು ಅವಿಷ್ಕಾರಿಸಿದೆ. 30 ಕೆಜಿ ತೂಕವಿರುವುದರಿಂದ ಸುಲಭವಾಗಿ ವ್ಯಕ್ತಿಯೊಬ್ಬ ಒತ್ತು ಸಾಗಬಹುದಾಗಿದೆ.

ಸಾಧಾರಣ ಸೈಕಲ್‍ಗೆ ಕಬ್ಬಿಣದ ಪೈಪ್ ಲಿಂಗ್ ಮಾಡಿ, ಟ್ರ್ಯಾಕ್ ಮೇಲೆ ಚಲಿಸುವ ಸಂದರ್ಭದಲ್ಲಿ ಬ್ಯಾಲೆನ್ಸ್ ತಪ್ಪದಂತೆ ಸಿದ್ಧಪಡಿಸಲಾಗಿದೆ. ಈ ಸೈಕಲ್‍ಗಳನ್ನು ಪ್ರಮುಖವಾಗಿ ಮನ್ಸೂನ್ ಅವಧಿಯಲ್ಲಿ ರೈಲ್ವೆ ಟ್ರ್ಯಾಕ್ ಪರಿಶೀಲನೆ ನಡೆಸಲು ಬಳಸಿಕೊಳ್ಳಬಹುದಾಗಿದೆ. ಇದುವರೆಗೂ ರೈಲ್ವೆ ಸಿಬ್ಬಂದಿ ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗುತ್ತಾ ಪರಿಶೀಲನೆ ನಡೆಸುತ್ತಿದ್ದರು. ಸದ್ಯ ಪೂರ್ವ ಕರಾವಳಿ ರೈಲ್ವೆ, ತನ್ನ ಟ್ವಿಟ್ಟರ್ ಖಾತೆಯಲ್ಲಿ ಹೊಸ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಖುರ್ಡಾ ವಿಭಾಗದಲ್ಲಿ ರೈಲ್ಚೆ ಬೈಸಿಕಲ್ ಬಳಸಿಕೊಂಡು ಟ್ರ್ಯಾಕ್ ಪರಿಶೀಲನೆ ಮಾಡುವ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಲಾಗಿದೆ. ಬೈಸಿಕಲ್ ಕಡಿಮೆ ತೂಕ ಹೊಂದಿರುವ ಕಾರಣ ಸಾಮಾನ್ಯ ವ್ಯಕ್ತಿ ಇದನ್ನು ಒತ್ತು ಸಾಗಬಹುದಾಗಿದೆ.

ಸದ್ಯ ಕೊರೊನಾ ಕಾರಣದಿಂದ ಸ್ಥಗಿತಗೊಂಡಿರುವ ರೈಲ್ವೆ ವಿಭಾಗಗಳಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗಸ್ತು ತಿರುಗಲು ಸಿಬ್ಬಂದಿ ಬಳಸಿಕೊಳ್ಳಬಹುದು ಎಂದು ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ