ಗಾಂಧೀನಗರ: ಗುಜರಾತ್ ಕಾಂಗ್ರೆಸ್ ಮಾಜಿ ಮುಖ್ಯ ವಕ್ತಾರ ಜಯರಾಜ್ ಸಿಂಗ್ ಪರ್ಮಾರ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ.
ಈ ಕುರಿತಂತೆ ಫೇಸ್‍ಬುಕ್‍ನಲ್ಲಿ ಪರ್ಮಾರ್ ಅವರು ಕಾಂಗ್ರೆಸ್‍ನ ಹಿರಿಯ ನಾಯಕರ ನಿರ್ಲಕ್ಷಕ್ಕೆ ಬೇಸತ್ತಿದ್ದು, ಪಕ್ಷದಲ್ಲಿ ಕೆಲವರಿಗೆ ಮಾತ್ರ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಮೂರು ವರ್ಷಗಳಿಂದಲೂ ಪಕ್ಷದಲ್ಲಿದ್ದರೂ ಯಾವುದೇ ಸ್ಥಾನವನ್ನು ನೀಡಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಯರಾಜ್ ಸಿಂಗ್ ಪರ್ಮಾರ್ ಅವರು ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಸೇರುವ ಸಾಧ್ಯತೆಗಳಿದೆ.