ಬೆಂಗಳೂರು : ಕಾಂಗ್ರೆಸ್ ನಾಯಕರು ಇಂದು ಸದನದ ಕಲಾಪದಲ್ಲಿ ಟ್ರೈಲರ್ ಮೂಲಕ ಮುಂದೆ 2023 ರಲ್ಲಿ ಏನಾಗುತ್ತೆ ಎಂಬುದನ್ನ ತೋರಿಸಿದ್ದಾರೆ, ಜನ ಇದರಿಂದ ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, .ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸಬಹುದು ಎಂದು ಹೇಳಿದ್ದ ಈಶ್ವರಪ್ಪ ಅವರ ಬಗ್ಗೆ ಕಾಂಗ್ರೆಸ್ ನಾಯಕರು ನಿಲುವಳಿ ಸೀಮಿತಗೊಳಿಸಿದ್ದಾರೆ. ಜೆಡಿಎಸ್ ನಿಂದಲೂ ನಿಲುವಳಿ ಮಂಡಿಸಲಾಗಿತ್ತು. ಕಾನೂನು ಸಚಿವರು ಪ್ರತ್ಯುತ್ತರ ಕೊಟ್ಟರು. ಇದು ನನಗೆ ಪ್ರಮುಖ ವಿಷಯವಲ್ಲ.ಕರಾವಳಿ ಭಾಗದ ಶಾಲೆಯಲ್ಲಿ ಶುರುವಾದ ಹಿಜಾಬ್ ವಿವಾದವೇ ಮುಖ್ಯ. ಹಿಜಾಬ್ ಧರಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಕರಾವಳಿ ಪ್ರದೇಶದ ಶಾಲೆಯಲ್ಲಿ ಪ್ರೇರೇಪಿಸಿ ಕಳುಹಿಸಿದ್ದರು. ಈ ವರ್ಷ ಡಿಸೆಂಬರ್ ನಲ್ಲಿ ಹತ್ತು ಮಕ್ಕಳು ಧರಿಸಿ ಬಂದಿದ್ದರು. ಅದರ ಹಿನ್ನೆಲೆ ಯಾರ್ಯಾರು ಇದ್ದಾರೆ ಎಂದು ಪರಿಗಣಿಸಿ ಮೊಟಕುಗೊಳಿಸಬೇಕಿತ್ತು. ಸರ್ಕಾರ ವಿಫಲವಾಯಿತು. ಕೇಸರಿ ಶಾಲು ಹಾಕಲಾಯಿತು. ಕುಂದಾಪುರದಲ್ಲಿ ನಡೆದುಕೊಂಡು ಬಂದ ರೀತಿ ಏನು? ಪ್ರೋತ್ಸಾಹ ಕೊಡುವವರನ್ನ ಬಲಿ ಕೊಡಬೇಡಿ ಎಂದರು.