ಸಿಎಂ ಇಬ್ರಾಹಿಂ ರೆಬೆಲ್ ಆಗಿರೋ ವಿಚಾರ ಕಾಂಗ್ರೆಸ್ನಲ್ಲಿ ಹೊಸ ಚರ್ಚೆ, ಆತಂಕ ಹುಟ್ಟುಹಾಕಿತ್ತು. ಇಬ್ರಾಹಿಂ ಮನವೊಲಿಕೆಗೂ ಕಸರತ್ತು ಶುರುವಾಗಿತ್ತು. ಇದು ಈಗಲೂ ನಡೆಯುತ್ತಲೇ ಇದೆ. ಇದರ ಭಾಗವಾಗಿ ನಿನ್ನೆ ಹುಬ್ಬಳ್ಳಿಯಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಸಿ.ಎಂ ಇಬ್ರಾಹಿಂರನ್ನ ಭೇಟಿ ಮಾಡಿದ್ದಾರೆ. ಕೆಲ ಕಾಲ ಸೀಕ್ರೆಟ್ ಚರ್ಚೆಯನ್ನ ನಡೆಸಿರೋದು ಕುತೂಹಲಕ್ಕೆ ಕಾರಣವಾಗಿದೆ.
ಭೇಟಿಯ ವೇಳೆ ಬಡೇ ಮಿಯಾಗೆ ಛೋಟೇ ಮಿಯಾ ಐಸ್ಕ್ರೀಂ ತಿನ್ನಿಸಿದ್ದಾರೆ. ಸಿ.ಎಂ. ಇಬ್ರಾಹಿಂ ಬಾಯಿಗೆ ಖುದ್ದು, ಜಮೀರ್ ಐಸ್ ಇಟ್ಟಿದ್ದಾರೆ. ಈ ಭೇಟಿ ರಾಜಕೀಯವಾಗಿ ಮಾತಿನ ಮಲ್ಲನ ಮನಸ್ಸು ಕರಗಿಸುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಪಕ್ಷವನ್ನ ಗಟ್ಟಿಗೊಳಿಸೋ ನಿಟ್ಟಿನಲ್ಲೂ ಉಭಯ ನಾಯಕರ ಮಾತುಕತೆ ನಡೆದಿದೆ ಎನ್ನಲಾಗಿದೆ.