Breaking News

ಹೆಂಡತಿಯ ತಂಗಿಯನ್ನೇ ಗರ್ಭಿಣಿಯನ್ನಾಗಿಸಿದ ವ್ಯಕ್ತಿ: ಹೆರಿಗೆ ಬಳಿಕ ಪ್ರಕರಣ ಬೆಳಕಿಗೆ

Spread the love

ಶಿವಮೊಗ್ಗ: ಪತ್ನಿಯ ತಂಗಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆರೋಪಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಶಿವಮೊಗ್ಗ ತಾಲೂಕು ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಪ್ರವೀಣ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರವೀಣ ಹೋಟೆಲ್ ನಡೆಸುತ್ತಿದ್ದನು. ಮದುವೆಯಾದ ಬಳಿಕ ತನ್ನ ಹೆಂಡತಿಯ ತಂಗಿಯನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ಓದಿಸುತ್ತಿದ್ದನು.

ಮಗುವಿನ ಸಾವು ಪ್ರವೀಣ ಕೃತ್ಯ ಬಯಲು:
ಕಳೆದ ಐದಾರು ವರ್ಷಗಳಿಂದ ಮನೆಯಲ್ಲೇ ಇದ್ದ ತನ್ನ ಪತ್ನಿ ತಂಗಿಯ ಮೇಲೆ ಕಣ್ಣಿಟ್ಟಿದ್ದ ಪ್ರವೀಣ ಬಲವಂತದಿಂದ ಕಳೆದ ಒಂದು ವರ್ಷದಿಂದ ದೈಹಿಕ‌ ಸಂಪರ್ಕ ಬೆಳೆಸಿದ್ದ. ಆಕೆ ಹೊಟ್ಟೆ ನೋವು ಅಂತ ಹೇಳಿದಾಗ ಪೋಷಕರು ಆಸ್ಪತ್ರೆಗೆ ಕರೆದು‌ಕೊಂಡು ಹೋದಾಗ ಐದು ತಿಂಗಳ ಗರ್ಭಿಣಿ‌ ಎಂಬುದು ಗೊತ್ತಾಗಿತ್ತು. ಇದರಿಂದ ಹೆದರಿದ ಪೋಷಕರು ಆಕೆಯನ್ನುತಮ್ಮ‌ ಮನೆಗೆ ಕರೆದು‌ಕೊಂಡು ಹೋಗುತ್ತಾರೆ. ನಂತರ ಎಂಟು ತಿಂಗಳಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗುತ್ತದೆ. ಅವಧಿಗೂ ಮುನ್ನ ಜನಿಸಿದ ಮಗುವನ್ನು ಖಾಸಗಿ ಆಸ್ಪತ್ರೆಯಿಂದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗುತ್ತದೆ. ಆದ್ರೆ ನಂತರ ಮಗು ಸಾವನ್ನಪ್ಪುತ್ತದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ