ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರವರ ಜಾತಿ-ಧರ್ಮ ಅವರ ಜೊತೆಯೇ ಇರುತ್ತದೆ. ಆದ್ರೆ, ಶಾಲಾ ಕಾಲೇಜುಗಳಲ್ಲಿ ಜಾತಿ-ಧರ್ಮ ತರುವುದು ಸರಿಯಲ್ಲ. ಸರ್ಕಾರ ಈ ಹಿಜಾಬ್, ಕೇಸರಿ ಶಾಲು ವಿವಾದ ತಡೆಯಲು ಮುಂದಾಗಬೇಕು. ಎಲ್ಲ ಕಡೆ ಸ್ಪ್ರೆಡ್ ಆದ್ರೆ ಬಹಳ ದೊಡ್ಡ ಸಮಸ್ಯೆ ಆಗುತ್ತದೆ ಎಂದರು.
ರಾಮದುರ್ಗದಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿರುವುದು ಸರಿಯಲ್ಲ. ಆ ರೀತಿ ಎಲ್ಲೂ ನಡೆಯಬಾರದು ಎಂಬುದು ನಮ್ಮ ಕಳಕಳಿಯ ಮನವಿ. ಇಲ್ಲಿ ರಾಜಕಾರಣ ಇಲ್ಲ. ಆದರೆ, ಧರ್ಮದ ವ್ಯವಸ್ಥೆ ಆ ರೀತಿ ಮಾಡುತ್ತಿದೆ.ಮೊದಲು ಧರ್ಮಗಳನ್ನು ಪೂರ್ಣ ಅಧ್ಯಯನ ಮಾಡಬೇಕು. ಕೇಸರಿ ಶಾಲು ಹಾಕು, ಮತ್ತೊಂದು ಶಾಲು ಹಾಕು ಅಂತಾ ಯಾವುದೇ ಧರ್ಮಗಳು ಹೇಳಿಲ್ಲ. ಧರ್ಮಗಳು ಒಳ್ಳೆಯದನ್ನೇ ಹೇಳಿವೆ. ಆದರೆ, ಕೆಲವು ಸಂಘಟನೆಗಳಿಂದ ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
Laxmi News 24×7