ಮುಂಬೈ : ಅಮಿತಾಬ್ ಬಚ್ಚನ್ ಅವರು ಮುಂಬೈನಲ್ಲಿ ಅನೇಕ ಬೆಲೆಬಾಳುವ ಆಸ್ತಿಗಳನ್ನು ಹೊಂದಿದ್ದಾರೆ. ಆದರೆ ಇತ್ತೀಚೆಗೆ ಅವರು ಗುಲ್ಮೊಹರ್ ಪಾರ್ಕ್‍ನಲ್ಲಿರುವ ತಮ್ಮ ದಕ್ಷಿಣ ದೆಹಲಿಯಲ್ಲಿರುವ ‘ಸೋಪಾನ್’ ಹೆಸರಿನ ಮನೆಯನ್ನು 23 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.
ನೆಜೋನ್ ಗ್ರೂಪ್ ಆಫ್ ಕಂಪನಿಗಳ (ಸಿಇಒ) ಅವ್ನಿ ಬೇಡರ್ ಅವರಿಗೆ ಬಚ್ಚನ್ ಮನೆಯನ್ನು ಮಾರಾಟ ಮಾಡಿದ್ದಾರೆ. ಬಚ್ಚನ್ ಅವರು ಈ ಮನೆಯುನ್ನು ಕಟ್ಟಿಸಿ ತುಂಬಾ ವರ್ಷಗಳಾಗಿದ್ದು, ಇದು ಹಳೆಯ ನಿರ್ಮಾಣವಾಗಿದೆ. ಆದ್ದರಿಂದ ನಾವು ಸೋಪಾನ್ ಮನೆಯನ್ನು ಕೆಡವುತ್ತೇವೆ.
ನಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಆ ಮನೆಯನ್ನು ಹೊಸದಾಗಿ ನಿರ್ಮಿಸುತ್ತೇವೆ. ನಾವು ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ನಾನು ಹೆಚ್ಚುವರಿ ಆಸ್ತಿಗಾಗಿ ದೆಹಲಿಯಲ್ಲಿ ಒಂದು ಮನೆಯನ್ನು ಹುಡುಕುತ್ತಿದ್ದೆ. ಆಗ ಅಮಿತಾಬ್ ಅವರ ಮನೆ ಮಾರಾಟಕ್ಕಿರುವುದು ತಿಳಿದುಬಂದಿದ್ದು, ತಕ್ಷಣ ಆ ಮನೆಯನ್ನು ಖರೀದಿಸಿದ್ದೇವೆ ಎಂದು ಅವ್ನಿ ಅವರು ಮಾಧ್ಯಮದ ಮೂಲಕ ತಿಳಿಸಿದರು. ಈ ಹಿಂದೆ ಸೋಪಾನ್ ಮನೆಯಲ್ಲಿ ಅಮಿತಾಭ್ ಬಚ್ಚನ್ ಅವರ ತಂದೆ ಪ್ರಸಿದ್ಧ ಕವಿ ಹರಿವಂಶ್ ರಾಯ್ ಬಚ್ಚನ್ ಮತ್ತು ಅವರ ತಾಯಿ ದಿವಂಗತ ತೇಜಿ ಬಚ್ಚನ್‍ರವರು ವಾಸಿಸುತ್ತಿದ್ದರು. ಈ
ಮನೆಯು 418.5 ಚದರ ಮೀಟರ್ ಜಾಗದಲ್ಲಿದ್ದು, ಡಿಸೆಂಬರ್ 7 ರಂದು ಇದರ ನೊಂದಣಿಯನ್ನು ಪೂರ್ಣಗೊಳಿಸಲಾಗಿತ್ತು