Breaking News

ನಿರಾಣಿ ಚಮಚಾಗಳು, ಸಹೋದರರಿಂದ ಸ್ವಾಮೀಜಿಗೆ ನೋವು: ವಿಜಯಾನಂದ ಕಾಶಪ್ಪನವರ

Spread the love

ಬೆಳಗಾವಿ: ‘ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ನೀಡಿರುವ ದಾನದ ಬಗ್ಗೆ ಸಚಿವ ಮುರುಗೇಶ ನಿರಾಣಿ ಅವರ ಚಮಚಾಗಳು, ಸಹೋದರ ಲಕ್ಷ್ಮಣ ನಿರಾಣಿ ಮೊದಲಾದವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕುತ್ತಿದ್ದಾರೆ. ಅದನ್ನು ಸಮಾಜ ತೀವ್ರವಾಗಿ ಖಂಡಿಸುತ್ತದೆ’ ಎಂದು ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ತಿಳಿಸಿದರು.

 

ಇಲ್ಲಿ ನಡೆದ ಸಮಾಜದ ಕಾರ್ಯಕಾರಿಣಿ ನಂತರ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಸಂಘಟನೆಯಲ್ಲಿ ಇಲ್ಲದವರು, ಮೀಸಲಾತಿ ಹೋರಾಟದಲ್ಲಿ ಭಾಗವಹಿಸದವರು ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮನಸ್ಸಿಗೆ ನೋವಾಗಿದೆ. ಹೀಗಾಗಿ, ನಿರಾಣಿ ಅವರು ನೀಡಿದ ಮಠಕ್ಕೆ ನೀಡಿದ ವಸ್ತುಗಳನ್ನು ಮರಳಿಸಲು ಒಮ್ಮತದಿಂದ ನಿರ್ಣಯಿಸಲಾಗಿದೆ’ ಎಂದರು.

‘ನಿರಾಣಿ ಸಹೋದರರು, ನಮ್ಮ ಪೀಠದ ಪರವಾಗಿ ಬರುವ ಸಮಾಜದವರಿಗೆ ಧಮ್ಕಿ ಹಾಕುವುದು, ಅವರ ಮನೆಗೆ ಹೋಗಿ ಹೊಡೆಯವುದು ಮತ್ತು ದೌರ್ಜನ್ಯ ಎಸಗುವುದು ಮಾಡುತ್ತಿದ್ದಾರೆ. ಈ ಬಗ್ಗೆ ಸಮಾಜದವರು ನನಗೆ ದೂರು ನೀಡಿದ್ದಾರೆ’ ಎಂದು ಆರೋಪಿಸಿದರು.

‘ಅವರು ರಸ್ತೆಯಲ್ಲಿ ನಿಂತಿದ್ದಾರೆಂದು ನಾವೂ ನಿಲ್ಲಲಾಗದು. ಅವರು ಚಿಲ್ಲರೆಗಳಾದರೆಂದು ನಾವೂ ಆಗಲಾಗುವುದಿಲ್ಲ. ತಪ್ಪು ಮಾಡಿದವರಿಗೆ ಗುರುಗಳು ಬುದ್ಧಿ ಹೇಳುತ್ತಾರೆ. ಆದಾಗ್ಯೂ ತಿದ್ದಿಕೊಳ್ಳದಿದ್ದಲ್ಲಿ ಸಮಾಜವೇ ಪಾಠ ಕಲಿಸುತ್ತದೆ’ ಎಂದು ಪ್ರತಿಕ್ರಿಯಿಸಿದರು.


Spread the love

About Laxminews 24x7

Check Also

ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ: ಅಧ್ಯಕ್ಷ ರವಿಕುಮಾರ್‌ ಕೊನೆಗೂ ರಾಜೀನಾಮೆ

Spread the loveಬೆಂಗಳೂರು, (ಸೆಪ್ಟೆಂಬರ್ 05): ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ (Bhovi Development Corporation) ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ