ಬೆಂಗಳೂರು: ಸೈಬರ್ ಖದೀಮರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆ ತಯಾರಿ ನಡೆಸಿದ್ದು, ನಗರದ ಎಂಟು ಸಿಇಎನ್ ಠಾಣೆಗೆ ಇಬ್ಬರು ಸೈಬರ್ ಎಕ್ಸ್ಪರ್ಟ್ಸ್ಗಳನ್ನು ನೇಮಿಸಿಕೊಳ್ಳಲು ಪ್ರಕಟಣೆ ಹೊರಡಿಸಲಾಗಿದೆ.
ನಗರದಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಎಕ್ಸ್ಪರ್ಟ್ಸ್ ನೇಮಕಕ್ಕೆ ಜಾಹೀರಾತು ನೀಡಲಾಗಿದೆ. ಕೇಸ್ ಪತ್ತೆ ಹಚ್ಚಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಪ್ರಕರಣ ಭೇದಿಸುವಲ್ಲಿ ಪರದಾಡುತ್ತಿದ್ದಾರೆ.
ಕೌಶಲ್ಯತೆಯ ಕೊರತೆ ಕಂಡು ಬರುತ್ತಿದೆ. ಜೊತೆಗೆ ವರ್ಷದಿಂದ ವರ್ಷಕ್ಕೆ ಸಾವಿರಾರು ಸೈಬರ್ ಕ್ರೈಂ ಕೇಸ್ ದಾಖಲಾಗುತ್ತಿದೆ. ಹೀಗಾಗಿ, ಪ್ರಕರಣ ಪತ್ತೆಹಚ್ಚಲು ಪೊಲೀಸ್ ಇಲಾಖೆ ನೂತನ ಪ್ಲಾನ್ ಮಾಡಿದ್ದು, ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7