ಸಿರವಾರ(ರಾಯಚೂರು ಜಿಲ್ಲೆ): ಪಟ್ಟಣದ ಖಾಸಗಿ ಸಹಕಾರಿ ಪತ್ತಿನ ಸಂಘದ ಉದ್ಯೋಗಿಯಾಗಿದ್ದ ಶಿರೀಷಾ(32) ಅವರು ಪುತ್ರಿ ಭುವನಾ(5) ಸಹಿತ ಮನೆಯಲ್ಲಿಯೇ ಬೆಂಕಿಯಲ್ಲಿ ಸೋಮವಾರ ಸಜೀವ ದಹನವಾಗಿದ್ದಾರೆ.
ಇನ್ನೊಬ್ಬ ಪುತ್ರಿಯನ್ನು ಶಾಲೆಗೆ ಬಿಟ್ಟು ಬರುವುದಕ್ಕೆ ಪತಿ ಹೊರ ಹೋಗಿದ್ದರು.
ಮನೆಯಲ್ಲಿ ಸಂಬಂಧಿಗಳು ಕೂಡಾ ಹೊರಗೆ ಹೋಗಿದ್ದರು. ಮೃತ ಮಹಿಳೆಯ ತವರು ಮನೆ ಆಂಧ್ರಪ್ರದೇಶದ ಆದೋನಿಯಿಂದ ಯಾರೂ ಬಾರದ ಕಾರಣ ಪೊಲೀಸರು ತಡರಾತ್ರಿವರೆಗೂ ಪ್ರಕರಣ ದಾಖಲಿಸಿಕೊಂಡಿರಲಿಲ್ಲ.
ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿದರು.