ಮಾತು ಬಾರದೇ ಇದ್ದರೂ ಮೊಬೈಲ್ ಮೂಲಕ ಪರಸ್ಪರ ಪರಿಚಯ ಪ್ರೀತಿಗೆ ತಿರುಗಿದ್ದು, ಪೋಷಕರ ವಿರೋಧದ ನಡುವೆಯೂ ವಿಕಲಚೇತರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹರಪನಹಳ್ಳಿ ಕಡಬಗೆರಿಯ ಅಕ್ಷತಾ ಬಿ ಮತ್ತು ರಾಣೆಬೆನ್ನೂರಿನ ಮೇಡ್ಲೇರಿಯ ಸಂಜು ಕೆ.ವಾಲ್ಮಿಕಿ ಚಿಗಟೇರಿ ಪೊಲೀಸರ ಸಮ್ಮುಖದಲ್ಲಿ ವಿವಾಹ ಆಗಿದ್ದಾರೆ.
ಪೋಷಕರ ವಿರೋಧದ ನಡುವೆ ದಾವಣಗೆರೆಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮಾತು ಬಾರದ ಕಿವಿ ಕೇಳದ ವಿಕಲ ಚೇತನ ಜೋಡಿ ಕಿವುಡ ಮತ್ತು ಮೂಖರ ಶಾಲೆಯಲ್ಲೇ ಪ್ರೇಮದ ಬಲೆಗೆ ಬಿದ್ದಿದ್ದರು.
ಅನ್ಯಜಾತಿ ಯುವಕ ಎಂಬ ಕಾರಣಕ್ಕೆ ಯುವತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಹುಡುಗಿ ಕಿಡ್ನಾಪ್ ಮಾಡಲಾಗಿದೆ ಎಂದು ಪೊಲೀಸ್ ಪ್ರಕರಣ ಕೂಡ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಪೋಷಕರಿಗೆ ಬುದ್ದಿ ಮಾತು ಹೇಳಿ ಮದುವೆಗೆ ಒಪ್ಪಿಸಿದ್ದಾರೆ. ಕೊನೆಗೆ ಹಾರ ಬದಲಿಸಿಕೊಂಡು ಹುಡುಗನ ಮನೆಯನ್ನು ಪ್ರೇಯಸಿ ಅಕ್ಷತಾ.ಬಿ. ಸೇರಿದ್ದಾರೆ. ಹರಪನಹಳ್ಳಿ ತಾಲ್ಲೂಕಿನಲ್ಲಿ ಅಪರೂಪದ ಜೋಡಿಗೆ ಹುಡುಗನ ಕುಟುಂಬಸ್ಥರು ಶುಭ ಹಾರೈಸಿದ್ದಾರೆ.