ಕಲಘಟಗಿ: ತಾಲ್ಲೂಕಿನ ತಂಬೂರ ಕ್ರಾಸ್ ಬಳಿ ಹುಬ್ಬಳ್ಳಿ- ಕಾರವಾರ ರಾಷ್ಟೀಯ ಹೆದ್ದಾರಿಯಲ್ಲಿ ಭಾನುವಾರ ನಡೆದ ಲಾರಿ, ಬೈಕ್ ಡಿಕ್ಕಿಯಲ್ಲಿ ಬೈಕ್ ಸವಾರರಾದ ಧಾರವಾಡ ಜಿಲ್ಲಾ ಆಸ್ಪತ್ರೆಯ ಇಬ್ಬರು ನೌಕರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನೂರಅಹ್ಮದ್ ಬೆಳಗಾಮ್ (38) ಹಾಗೂ ಜಾವಿದ್ ಪಠಾಣ್ (42) ಮೃತರು.
ಲಾರಿ ಚಾಲಕನ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲಘಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.