ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ ಮೂರು ತಿಂಗಳು ಕಳೆದಿದೆ. ಕಳೆದ ವರ್ಷ ಅಕ್ಟೋಬರ್ 29 ರಂದು ಹೃದಯಾಘಾತದಿಂದ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿದ್ದರು. ಪುನೀತ್ ರಾಜ್ ಕುಮಾರ್ ನಿಧನರಾಗಿ ಮೂರು ತಿಂಗಳು ಕಳೆದ ಹಿನ್ನೆಲೆ, ಪುನೀತ್ ಸಮಾಧಿ ಬಳಿ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ.
ಸಮಾಧಿ ಬಳಿ ಅಶ್ವಿನಿ ಪುನೀತ್ ರಾಜ್ಕುಮಾರ್, ಪುತ್ರಿ ಧೃತಿ , ರಾಘವೇಂದ್ರ ರಾಜ್ ಕುಮಾರ್ ಮತ್ತು ಅವರ ಪತ್ನಿ ಹಾಗೂ ವಿಜಯ್ ರಾಘವೇಂದ್ರ, ಧೀರೇನ್ ರಾಮ್ ಕುಮಾರ್, ಪುನೀತ್ ಸಹೋದರಿ ಲಕ್ಷ್ಮೀ ಹಾಗೂ ಎಸ್.ಎ.ಗೋವಿಂದ್ ರಾಜು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಸಮಾಧಿ ಬಳಿ ಪುನೀತ್ ರಾಜ್ ಕುಮಾರ್ ಅವರಿಗೆ ಇಷ್ಟವಾದ ತಿಂಡಿಗಳನಿಟ್ಟು ಕುಟುಂಬಸ್ಥರು ನಮನ ಸಲ್ಲಿಸಿದ್ದಾರೆ. ಪೂಜೆ ಬಳಿಕ ಅಶ್ವಿನಿ ಪುನೀತ್ ರಾಜ್ ಕುಮಾರ್, ಅಭಿಮಾನಿಗಳಿಗೆ ಬಾದಾಮಿ, ಸೀಬೆ, ಮಾವು, ತೇಗ, ಹಲಸಿನ ಸಸಿಗಳನ್ನು ವಿತರಿಸಿದ್ದಾರೆ.
ಇನ್ನು ಸಮಾಧಿ ಅವರಣದಲ್ಲಿ, ರಾಘವೇಂದ್ರ ರಾಜ್ ಕುಮಾರ್ ಗಿಡ ನೆಟ್ಟ ಅಪ್ಪು ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಇನ್ನು ಅಪ್ಪು ಮೂರನೇ ತಿಂಗಳ ಕಾರ್ಯಕ್ಕೆ ಸಹೋದರ ಡಾ.ಶಿವರಾಜ್ಕುಮಾರ್, ಮೈಸೂರಿನಲ್ಲಿ ವೇದ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಕಾರಣ, ಸಮಾಧಿ ಬಳಿ ಬರಲು ಸಾಧ್ಯವಾಗಿಲ್ಲ.