Breaking News

ಶೀಘ್ರವೇ ನಿರ್ಧಾರ: ಪೆಟ್ರೋಲ್ ಹಾಕಿಸಿಕೊಳ್ಳುವ ಮೊದಲು ಈ ಪ್ರಮಾಣಪತ್ರ ತೋರಿಸಬೇಕಾಗುತ್ತದೆ!

Spread the love

ನವದೆಹಲಿ: ಪಂಪ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್(Petrol and Diesel) ತುಂಬಿಸಿಕೊಳ್ಳಲು ದೆಹಲಿ ಸರ್ಕಾರವು ಶೀಘ್ರದಲ್ಲೇ ಪಿಯುಸಿ ಪ್ರಮಾಣಪತ್ರ(Pollution Under Control Certificate)ವನ್ನು ಕಡ್ಡಾಯಗೊಳಿಸಲಿದೆ. ದೆಹಲಿಯಲ್ಲಿ ಮಾಲಿನ್ಯಕಾರಕ ವಾಹನಗಳು ಸಂಚರಿಸುವುದನ್ನು ತಡೆಯಲು ಈ ನೀತಿಯು ನಮಗೆ ಸಹಾಯ ಮಾಡುತ್ತದೆ ಮತ್ತು ಜನರು ಇಲ್ಲಿ ಶುದ್ಧ ಗಾಳಿಯನ್ನು ಉಸಿರಾಡಬಹುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.

ಈ ಕರಡನ್ನು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಇರಿಸಲಾಗಿದೆ ಮತ್ತು ಜಾರಿಗೊಳಿಸುವ ಮೊದಲು ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪೆಟ್ರೋಲ್‌ಗೆ ಪಿಯುಸಿ ಪ್ರಮಾಣಪತ್ರವೂ ಅಗತ್ಯ!

ವಾಹನ ಮಾಲೀಕರು ತಮ್ಮ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು (PUC Certificate) ದೆಹಲಿಯ ಪೆಟ್ರೋಲ್ ಪಂಪ್‌ಗೆ ಕೊಂಡೊಯ್ಯಬೇಕಾಗುತ್ತದೆ. ಪಿಯುಸಿ ಅಮಾನ್ಯವಾಗಿದೆ ಎಂದು ಕಂಡುಬಂದರೆ ಅದನ್ನು ಅದೇ ಪಂಪ್‌ನಲ್ಲಿ ಮತ್ತೇ ನೀಡಬೇಕಾಗುತ್ತದೆ. ದೆಹಲಿಯ ಕಳಪೆ ವಾಯು ಗುಣಮಟ್ಟ (AQI) ಮಟ್ಟ ಪರಿಗಣಿಸಿ ಈ ಕ್ರಮವನ್ನು ಜಾರಿಗೊಳಿಸಲು ನಿರ್ಧರಿಸಿದ್ದು, ರಸ್ತೆಗಳಲ್ಲಿ ಮಾಲಿನ್ಯಕಾರಕ ವಾಹನಗಳ ಮೇಲೆ ಕಣ್ಣಿಡಲು ಇದು ಸಹಕಾರಿಯಾಗುತ್ತದೆ ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ