ಬೆಂಗಳೂರು : ಉದ್ಯೋಗ ಮತ್ತು ಇತರ ಜೀವನೋಪಾಯಕ್ಕಾಗಿ ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ವಲಸೆ ಹೋಗುವವರಿಗೆ ಆಹಾರ ಭದ್ರತೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ ಜಾರಿಗೆ ತಂದಿದೆ.
ರಾಷ್ಟ್ರದ ಯಾವುದೇ ರಾಜ್ಯದಲ್ಲಿ ಅಂತ್ಯೋದಯ ಅನ್ನ ಅಥವಾ ಆದ್ಯತಾ ಪಡಿತರ ಚೀಟಿ ಹೊಂದಿರುವವರು ರಾಷ್ಟ್ರದ ಯಾವುದೇ ಭಾಗದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿ ಸಂಖ್ಯೆ/ಆಧಾರ್ ಸಂಖ್ಯೆ ನೀಡಿ ಹೆಬ್ಬೆರಳಿನ ಜೀವಮುದ್ರೆ ನೀಡಿ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಬಹುದಾಗಿದೆ.
ರಾಷ್ಟ್ರದ ಯಾವುದೇ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿದ್ದರೂ ಅಂಥವರು ಯಾವುದೇ ರಾಜ್ಯದಲ್ಲಾದರೂ ಪಡಿತರ ಚೀಟಿ ಸಂಖ್ಯೆ/ಆಧಾರ್ ಸಂಖ್ಯೆ ಹೆಬ್ಬೆರಳಿನ ಮುದ್ರೆ ನೀಡುವ ಮೂಲಕ ಪಡಿತರ ಪಡೆಯಬಹುದು.
ಪಡಿತರ ಚೀಟಿದಾರರ ನೋಂದಣಿ ಹೇಗೆ?
ಒಂದು ರಾಷ್ಟ್ರಒಂದು ಪಡಿತರ ಚೀಟಿ ಯೋಜನೆಯ ಲಾಭ ಪಡೆಯಲು ಬಯಸುವ ಪಡಿತರ ಚೀಟಿದಾರರು ಭಾರತ ಸರ್ಕಾರದ ಮೇರಾ ರೇಷನ್ ಆಯಪ್ ಅಥವಾ ಸಹಾಯವಾಣಿ ಸಂಖ್ಯೆ 14445 ಕ್ಕೆ ಕರೆಮಾಡಿ ಒಂದು ನಿರ್ದಿಷ್ಟ ರಾಜ್ಯ/ಜಿಲ್ಲೆ/ ಸ್ಥಳದಲ್ಲಿ ಪಡಿತರ ಪಡೆಯುವ ಬಗ್ಗೆ ನೋಂದಾಯಿಸಿಕೊಳ್ಳಬಹುದು.
Laxmi News 24×7