Breaking News

ತಾಲೂಕಾ ಪಂಚಾಯತಿ ಸಭಾ ಭವನದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರು ಹೇಳಿದ್ದೇನು…?

Spread the love

ಗೋಕಾಕ :ಕೊರಾನಾಗೆ ಸಂಬಂದಪಟ್ಟಂತೆ ಇವತ್ತು ಗೋಕಾಕ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶಿಲನಾ ಸಭೆಯಲ್ಲಿ

ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೋಳಿಯವರು ಗೋಕಾಕ ಸರಕಾರಿ ವೈದ್ಯಾಧಿಕಾರಿಗಳಿಗೆ ಯಾವುದೆ ರೀತಿ ಕೊರಾನಾ ಸೊಂಕಿತರಿಗೆ ಭಯ ಪಡದಂತೆ ದಿನಾಲು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಅವರಿಗೆ ಬೇಕಾದಂತ ಎಲ್ಲ ಸೌಲಭ್ಯಗಳನ್ನು ನೀಡಬೇಕು, ಯಾವುದೆ ರೀತಿ ಲಕ್ಷಣ ಕಂಡು ಬರದೆ ಪೋಸಿಟಿವ ಬಂದವರನ್ನು ಆಸ್ಪತ್ರೆಗೆ ತರದೆ ಅಂತವರಿಗೆ ಮನೆಯಲ್ಲಿಯೆ ಇರಿಸಿ ಚಿಕತ್ಸೆ ನೀಡಿ ದೈರ್ಯ ತುಂಬುವ ಕೆಲಸ ಮಾಡಲು ಆದೇಶಿಸಿದರು,

 

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??

 

ಹಾಗೂ ರೈತರಿಗೆ ರಸಗೊಬ್ಬರನ್ನು ಒದಗಿಸುವಲ್ಲಿ ಸೊಸೈಟಿಯವರು ಉದ್ದೇಶಪೂರ್ವಕವಾಗಿ ಖಾಸಗಿಯವರ ಹತ್ತಿರ ರಸಗೊಬ್ಬರ ಖರಿದಿಸುವ ಸಲುವಾಗಿ ತಡವಾಗಿ ಸೊಸೈಟಿಯಿಂದ ರಸಗೊಬ್ಬರ ವಿತರಿಸುತ್ತಿರುವುದು ನನ್ನ ಗಮನಕ್ಕರ ಬಂದಿದೆ, ಅದು ನಿಲ್ಲಬೇಕು ,ಅಂತವರ ಲೈಸನ್ಸ್ ರದ್ದು ಮಾಡಿ ಬೇರೊಬ್ಬರಿಗೆ ನೀಡಲಾಗುತ್ತದೆ ಎಂದು ಕೃಷಿ ಅಧಿಕಾರಿಗೆ ಕ್ರಮ ಕೈಗೊಳ್ಕಲು ಎಚ್ಚರಿಸಿದರು.

 ಹಿಂದಿನ ಬಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರ ಬಗ್ಗೆ ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಾಗುವುದು  ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ  ಹೇಳಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಬೆಳಗಾವಿ,  ಬಾಗಲಕೋಟೆ, ವಿಜಯಪುರ ಮೂವರು ಜಿಲ್ಲೆಯ ಬಗ್ಗೆ ಮುಖ್ಯಮಂತ್ರಿ ಗಮನ ಸೆಳೆದಿದ್ದೇವೆ. ಈ ಬಾರಿ ಪ್ರವಾಹಕ್ಕಿಂತಲೂ  ಅತೀವೃಷ್ಟಿಯಿಂದ ಬಹಳಷ್ಟು ಹಾನಿಯಾಗಿದೆ. ಸದ್ಯ ಇದು ಸರ್ವೆ  ಹಂತದಲ್ಲಿರುವುದರಿಂದ ಪ್ರತಿಕ್ರಿಯಿಸುವುದು ಒಳಿತಲ್ಲ. ವರದಿ ಬಂದ ಬಳಿಕ ಈ ಕುರಿತು ಮಾಹಿತಿ ನೀಡುವೆ. ರಾಜ್ಯ ಸರ್ಕಾರ ಮತ್ತು ಬೆಳಗಾವಿ ಜಿಲ್ಲಾಡಳಿತ ಪ್ರವಾಹ ನಿಯಂತ್ರಿಸಲು  ಉತ್ನಮ ಕೆಲಸ ಮಾಡಿದೆ ಎಂದು  ಸಚಿವರು ಪ್ರಶಂಸಿದರು.

ಕೋವಿಡ್ ಗೆ ಹೆದರಬೇಡಿ!

ಕೋವಿಡ್ ಸೋಂಕಿನ ಭೀತಿ ಒಂದೆಡೆಯಾದ್ರೆ, ಅದಕ್ಕೆ  ಹೆದರಿ ನಿಧನವಾಗುತ್ತಿರುವವರ ಸಂಖ್ಯೆ ಹೆಚ್ಚುತಲಿದೆ. ಜನರು ಹೆದರದೇ ಇದನ್ನು ಸಾಮಾನ್ಯ ಕಾಯಿಲೆಯಂತೆ ಪರಿಗಣಿಸಬೇಕು. ಸೋಂಕಿತರ ಮನೆ ಬಾಗಿಲಿಗೆ, ಸ್ಟೀಕರ್ ಅಂಟಿಸುವುದು, ಸೀಲ್ ಹೊಡೆಯುವುದನ್ನು ನಿಲ್ಲಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಅಧಿಕಾರಿಗಳು ಸರ್ಕಾರದ ನಿಯಮ ಪಾಲಿಸಬೇಕು ಸೂಚನೆ ನೀಡಿದರು.

ಗೋಕಾಕ ನಗರದ ಸಾರ್ವಜನಿಕ ಆಸ್ಪತ್ರೆ ರಾಜ್ಯದಲ್ಲಿ ಮಾದರಿಯಾಗಿದೆ. ಇಲ್ಲಿಯವರೆಗೂ ಯಾವುದೇ ಕೋವಿಡ್ ಸೋಂಕಿತರಿಂದ ದೂರು ಬಂದಿಲ್ಲ. ಆ್ಯಂಬುಲೆನ್ಸ್ ಗಳ ಕೊರೆತೆ ಇದೆ ಎಂಬುವುದು ನನ್ನ ಗಮನಕ್ಕೆ ಬಂದಿದೆ.  ಖಾಸಗಿ ವಾಹನಗಳ ಬಾಡಿಗೆ ಪಡೆಯುವಂತೆ ಜಿಲ್ಲಾಧಿಕಾರಿ ಹಾಗೂ ಡಿಎಚ್ಓ ಅವರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

 

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

ರಾಯಬಾಗ ಪೊಲೀಸರಿಂದ 7.82ಲಕ್ಷ ಮೊತ್ತದ ಗಾಂಜಾ ವಶ ಆರೋಪಿಗಳ ಬಂಧನ

Spread the loveರಾಯಬಾಗ ಪೊಲೀಸರಿಂದ 7.82ಲಕ್ಷ ಮೊತ್ತದ ಗಾಂಜಾ ವಶ ಆರೋಪಿಗಳ ಬಂಧನ ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ