Breaking News

ಫುಡ್ ಡೆಲಿವರಿ ಬಾಯ್‌ನಿಂದ ಯುವತಿಗೆ ಕಿರುಕುಳ; ಮೊಬೈಲ್‌ಗೆ ಅಶ್ಲೀಲ ಫೋಟೋ ಕಳಿಸಿ ಕಿರಿಕಿರಿ

Spread the love

ಬೆಂಗಳೂರು: ಫುಡ್ ಡೆಲಿವರಿ ಬಾಯ್‌(Food delivery boy) ಯುವತಿಗೆ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಕಸವನಹಳ್ಳಿಯಲ್ಲಿ ನಡೆದಿದೆ. ಮೊಬೈಲ್‌ಗೆ ಅಶ್ಲೀಲ ಫೋಟೋ(Photos) ಕಳಿಸಿ ಕಿರಿಕಿರಿ ಮಾಡಿದ ಯುವಕನ ವಿರುದ್ಧ ಯುವತಿ ಸ್ನೇಹಿತ ಪೊಲೀಸ್ ಆಯುಕ್ತರಿಗೆ(police commissioner) ಟ್ವೀಟ್ ಮಾಡಿದ್ದು, ಯುವತಿಗೆ ಕಿರುಕುಳ ನೀಡಿರುವ ಬಗ್ಗೆ ಪ್ರಸ್ತಾಪಿಸಿದ್ದಾನೆ. ಫುಡ್ ಡೆಲಿವರಿಗಾಗಿ ನಂಬರ್ ನೀಡಿದ್ದ ಬೆಂಗಳೂರಿನ ಕಸವನಹಳ್ಳಿಯ ಯುವತಿಗೆ ಮೆಸೇಜ್ ಮಾಡಿ ಕಿರಿಕಿರಿ ಮಾಡಿದ್ದಾನೆ. ಬಿಹಾರದ ಮೊಬೈಲ್ ಸಂಖ್ಯೆಯಿಂದ ಮೆಸೇಜ್ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಫುಡ್ ಡೆಲಿವರಿ ಮಾಡಿದ ನಂತರವೂ ಮೆಸೆಜ್ ಮಾಡಿರುವ ಡೆಲಿವರಿ ಬಾಯ್, ನಿನ್ನ ಸ್ನೇಹಿತ ಎಂದು ಹೇಳಿಕೊಂಡು‌ ವಾಟ್ಸ್ ಆ್ಯಪ್ ಮೆಸೆಜ್ ಮಾಡಿದ್ದಾನೆ. ಮಧ್ಯರಾತ್ರಿ 11 ಗಂಟೆಗೆ ಮೆಸೆಜ್, ಕಾಲ್ ಮಾಡಿ ಕಿರುಕುಳ‌ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಸ್ಪ್ರಿಂಕ್ಸ್ ಎಂಬ ಕಂಪನಿಯಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್​ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಎಲ್ಲರೂ ಕೈ ಜೋಡಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಚೈತನ್ಯ ಕುಲಕರ್ಣಿ ಪ್ರಯತ್ನ ಸಂಘಟನೆ 15ನೇ ವಾರ್ಷಿಕೋತ್ಸವ ಉದ್ಘಾಟನೆ

Spread the love ಬೆಳಗಾವಿ : ರಾಜಕಾರಣಿಗಳಿಂದಲೇ ಎಲ್ಲವನ್ನೂ ನಿರೀಕ್ಷೆ ಮಾಡುವ ಬದಲು ಎಲ್ಲರೂ ಸೇರಿ ಕೆಲಸ ಮಾಡುವುದರಿಂದ ಉತ್ತಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ