Breaking News

ಸುಲೇಮಾನ್ ಸ್ಟೋನ್ ಹೆಸರಿನಲ್ಲಿ ವಂಚನೆ :ಬಾಗಲಕೋಟೆಯಲ್ಲಿ 5 ಲಕ್ಷ ಜಪ್ತಿ

Spread the love

ಬಾಗಲಕೋಟೆ : ಬದುಕಿನಲ್ಲಿ ಒಳ್ಳೆಯದಾಗಲು ಸುಲೇಮಾನ್ ಸ್ಟೋನ್ (ದೇವರ ಕಲ್ಲು) ಕೊಡುವುದಾಗಿ ಹೇಳಿ ಮೋಸದ ಮಾಡಿದ ಬಾಗಲಕೋಟೆಯ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ ೫ ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಅಶೋಕ ರೇವಣಸಿದ್ದಪ್ಪ ಇಂಡಿ ಎಂಬುವವರಿಗೆ ಅಜಯ ಎಂಬ ಹೆಸರಿನ ವ್ಯಕ್ತಿ ಯೂಟೂಬ್‌ನಲ್ಲಿ ಸುಲೇಮಾನ್ ಸ್ಟೋನ್ ಎಂಬ ದೇವರ (ದೈವಿ) ಕಲ್ಲನ್ನು ಮಾರಾಟ ಮಾಡುವುದಾಗಿ ದೂರವಾಣಿ ಸಂಖ್ಯೆಯ ಸಮೇತ ವಿವರ ಹಾಕಿದ್ದ.

ಈ ಕಲ್ಲನ್ನು ನಮ್ಮ ಬಳಿ ಇಟ್ಟುಕೊಂಡರೆ ಯಾವುದೇ ರೀತಿಯ ಅಪಘಾತವಾಗಲ್ಲ. ಯಾರೂ ನಮ್ಮ ಮೇಲೆ ದಾಳಿ ನಡೆಸಲ್ಲ. ಜೀವನದಲ್ಲಿ ತುಂಬಾ ಒಳ್ಳೆಯದಾಗುತ್ತದೆ. ಹಿಂದೆ ರಾಜ-ಮಹಾರಾಜರೆಲ್ಲ ಈ ದೈವಿ ಕಲ್ಲನ್ನು ಬಳಸುತ್ತಿದ್ದರು ಎಂದು ನಂಬಿಸಿ, 7 ಲಕ್ಷ ಮೊತ್ತಕ್ಕೆ ದೈವಿ ಕಲ್ಲನ್ನು ನೀಡುವುದಾಗಿ ಮೋಸತನದಿಂದ ಅಶೋಕ ಅವರನ್ನು ಬಾಗಲಕೋಟೆಗೆ ಕರೆಸಿ ಮೋಸ ಮಾಡಿದ್ದ. ಬಾಗಲಕೋಟೆಗೆ ಕರೆಸಿದ್ದಾಗ 5 ಲಕ್ಷ ನಗದು, ಒಂದು ಚಿನ್ನದ ಬ್ರೆಸಲೇಟ್ ನೀಡುವ ಜತೆಗೆ ಸುಲೇಮಾನ್ ಸ್ಟೋನ್ ಎಂದು ನಂಬಿಸಿ ಒಂದು ಕರಿ ಕಲ್ಲನ್ನು ನೀಡಿದ್ದ.

ಈ ಕುರಿತು ಅಶೋಕ ಅವರು ಬಾಗಲಕೋಟೆ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಾಗಲಕೋಟೆ ಉಪ ವಿಭಾಗದ ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ ಮಾರ್ಗದರ್ಶನದಲ್ಲಿ ಶಹರ ಠಾಣೆಯ ಇನ್ಸಪೆಕ್ಟರ್ ವಿಜಯ ಮುರಗುಂಡಿ, ಎಎಸ್‌ಐ ವಿ.ಕೆ. ಕುಲಕರ್ಣಿ, ಸಿಬ್ಬಂದಿಗಳಾದ ಎಂಡಿ ಸೌದಿ, ವಿ.ಬಿ. ಹಾದಿಮನಿ, ಮುತ್ತು ಅಜಮನಿ, ನಾಸೀರ ಬೀಳಗಿ ಅವರು ತನಿಖೆ ಕೈಗೊಂಡು, ಆರೋಪಿ ನಗರದ ಕೆಂಪು ರಸ್ತೆಯ ಬಳಿಯ ನಿವಾಸಿ ಸಮೀರ (ಅಜಯ) ಜಾಫರ ಜಹಾಗೀರದಾರ ಎಂಬಾತನನ್ನು ಬಂಧಿಸಿದ್ದಾರೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ