ಮಹಾರಾಷ್ಟ್ರ: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಗರ್ಭಿಣಿ ಅರಣ್ಯ ರಕ್ಷಕಿಯನ್ನು ಮಾಜಿ ಸರಪಂಚ್ ಮತ್ತು ಅವರ ಪತ್ನಿ ಕೂದಲು ಹಿಡಿದು ನೆಲಕ್ಕೆ ತಳ್ಳಿ ಎಳೆದಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲೆಡೆ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಇದನ್ನು ಭಾರತೀಯ ಅರಣ್ಯ ಸೇವಾ ಸಂಘವು ಅಮಾನುಷ ದಾಳಿಯನ್ನು ಖಂಡಿಸಿದೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಲವಾದ ನೀತಿಯನ್ನು ಒತ್ತಾಯಿಸಿದೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ IFS ಅಸೋಸಿಯೇಷನ್ ಬರೆದುಕೊಂಡಿದೆ, ‘ಮಹಾರಾಷ್ಟ್ರದಲ್ಲಿ ಸರ್ಕಾರಿ ಕೆಲಸ ಮಾಡುತ್ತಿದ್ದಾಗ 3 ತಿಂಗಳ ಗರ್ಭಿಣಿಯಾಗಿರುವ ಕರ್ತವ್ಯನಿರತ ಮಹಿಳಾ ಅರಣ್ಯ ಸಿಬ್ಬಂದಿ ʻಸಿಂಧು ಸನಪ್ʼ ಅವರನ್ನು ಥಳಿಸಲಾಗಿದೆ. IFSA ಈ ರೀತಿಯ ಕ್ರೂರ ದಾಳಿಗಳನ್ನು ಬಲವಾಗಿ ಖಂಡಿಸುತ್ತದೆ ಮತ್ತು ಬಲವಾದ ನೀತಿಯನ್ನು ಒತ್ತಾಯಿಸುತ್ತದೆ.
The #ForestGuard (lady) in the video was on duty when she was brutally attacked at #Satara for doing her job. FIR has been booked against the accused & they've been detained. Hope strict & immediate action is taken against the accused for the barbaric act.https://t.co/XKXUIUjYRd
— Praveen Angusamy IFS 🐾 (@JungleWalaIFS) January 20, 2022