ಕೊರೊನಾ ಮಹಾಮಾರಿ ಸೋಂಕು ಶಾಲೆಗೆ ಲಗ್ಗೆ ಇಟ್ಟಿದ್ದು, ಲ್ಯಾಮಿಂಗ್ಟನ್ ಶಾಲೆಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್‍ಡೌನ್ ಮಾಡಲಾಯಿತು.
ಹೈಸ್ಕೂಲ್‍ನ ಕೆಲವು ವಿದ್ಯಾರ್ಥಿಗಳಿಗೆ, ಸೋಂಕು ಒಕ್ಕರಿಸಿದ್ದಾಗಿ ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಶಾಲೆಯನ್ನು ಮುಂದಿನ ಆದೇಶ ಬರುವವರೆಗೂ ಸೀಲ್‍ಡೌನ್ ಮಾಡಲಾಗಿದೆ.
ಸ್ಥಳಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಶಾಲೆಯನ್ನು ಸೀಲ್‍ಡೌನ್ ಮಾಡಿದರು.