ಬುಧವಾರ ದಂದು ಬೆಳಗಾವಿ ನಗರದ ರವಿವಾರ ಪೇಟೆಯಲ್ಲಿ ವಾಸಿಸುವ ಅಸಂಘಟಿತ ಕಾರ್ಮಿಕರಿಗೆ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘ ಅಧ್ಯಕ್ಷೆ ಪ್ರೀತಿ ಕುಕಡೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡಿದರು.


ಬೆಳಗಾವಿ ಉತ್ತರ ಕ್ಷೇತ್ರದ ಜನಪ್ರಿಯ ಶಾಸಕ ಅನಿಲ ಬೆನಕೆ ಅವರ ಸಹಕಾರದೊಂದಿಗೆ ಪುಷ್ಪಂ ಆನ್ಲೈನ್ ಸರ್ವಿಸ್ ಸೆಂಟರ್ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಮಂಡಳ ವತಿಯಿಂದ ಕಳೆದ ವಾರ ನಗರದ ರವಿವಾರ ಪೇಟೆಯಲ್ಲಿ ವಾಸಿಸುವ ಅಸಂಘಟಿತ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರದ ಇ-ಶ್ರಮ್ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ರವಿವಾರ ಪೇಠ್ ಬುರುಡ ಗಲ್ಲಿ, ಭಾತಕಾಂಡೆ ಗಲ್ಲಿ ಹಾಗೂ ಮೆನಸಿ ಗಲ್ಲಿಯ ನಿವಾಸಿಗಳು ಈ ಅಭಿಯಾನದಲ್ಲಿ ಭಾಗವಹಿಸಿ ನೋಂದಣಿ ಮಾಡಿಕೊಂಡಿದ್ದರು.ಈ ಕುರಿತು ಇಂದು ನೋಂದಣಿ ಮಾಡಿಸಿಕೊಂಡ ಸುಮಾರು 70 ಜನ ಕಾರ್ಮಿಕರಿಗೆ ಕಾರ್ಡ್‌ಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪುಷ್ಪಂ ಆನ್ಲೈನ್ ಸರ್ವಿಸ್ ಸೆಂಟರ್ ಮಾಲಿಕರಾದ ರೋಹನ್,ಮೇದಾರ ಸಮಾಜದ ಅಧ್ಯಕ್ಷರಾದ ಪ್ರಕಾಶ ಹಜಗೊಳಕರ, ಸೇರಿದಂತೆ ಸ್ಥಳೀಯರಾದ ಉದಯ ಕಂತ್ರಾಟದಾರ,ಅನಿಲ ಕಂತ್ರಾಟದಾರ,ಗಾಯತ್ರಿ ಸುಳದಾಳ,ಕಲ್ಪನಾ ಕಂತ್ರಾಟದಾರ, ಮಹಾದೇವಿ ಹಜಗೊಳಕರ,ಮಂಜುನಾಥ ಹಜಗೊಳಕರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Laxmi News 24×7