Breaking News

ಬಿಎಂಟಿಸಿಗೆ ಹೊರೆಯಾದ ಎಲೆಕ್ಟ್ರಿಕ್‌ ಬಸ್‌ಗಳು

Spread the love

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಅದೃಷ್ಟವೇ ಸರಿ ಇದ್ದಂತಿಲ್ಲ. ಗರಿಷ್ಠ ಪ್ರಮಾಣದ ಪ್ರಯಾಣ ದರ ತಗ್ಗಿಸಿ ವೋಲ್ವೋ ಬಸ್‌ಗಳನ್ನು ರಸ್ತೆಗಿಳಿಸಲಾಯಿತು. ಆದರೂ ಅವುಲಾಭದ ಹಳಿಗೆ ಬರುತ್ತಿಲ್ಲ. ಡೀಸೆಲ್‌ ದುಬಾರಿ ಆಗು ತ್ತಿರುವುದರಿಂದಎಲೆಕ್ಟ್ರಿಕ್‌ ಬಸ್‌ಗಳನ್ನು ಪರಿಚಯಿಸಿದೆ.

ಅವುಗಳೂ ಈಗ ಗಾಯದ ಮೇಲೆ ಬರೆ ಎಳೆಯುತ್ತಿವೆ!

ಪ್ರತಿ ಎಲೆಕ್ಟ್ರಿಕ್‌ ಬಸ್‌ಗಳು ನಿತ್ಯ ತರುತ್ತಿರುವ ತಲಾ ಆದಾಯ ಸರಾಸರಿ 4,500ರಿಂದ 5,000 ರೂ. ಆದರೆ, ಇದಕ್ಕೆ ಪ್ರತಿಯಾಗಿ ಈಬಸ್‌ಗಳನ್ನು ಪೂರೈಸಿದ ಕಂಪನಿಗಳಿಗೆ ಬಿಎಂಟಿಸಿ ಪಾವತಿಸುತ್ತಿರುವಮೊತ್ತ ದುಪ್ಪಟ್ಟು. ಅಂದರೆ ಒಂಬತ್ತು ಸಾವಿರ ರೂ. ಈ ಹಿನ್ನೆಲೆಯಲ್ಲಿಪರಿಸರ ಮತ್ತು ಕಾರ್ಯಾಚರಣೆ ವೆಚ್ಚ ತಗ್ಗಿಸುವ ಉದ್ದೇಶದಿಂದ ನಗರಾದ್ಯಂತ ಎಲೆಕ್ಟ್ರಿಕ್‌ ಬಸ್‌ಗಳು ಸಂಸ್ಥೆಗೆ ಸದ್ಯಕ್ಕಂತೂ ಹೊರೆಯಾಗುತ್ತಿವೆ.

ನಗರದಲ್ಲಿ ವಿದ್ಯುತ್‌ಚಾಲಿತ ಬಸ್‌ಗಳಿಗೆ ಡಿ.27ರಂದು ಚಾಲನೆ ನೀಡಲಾಗಿದ್ದು, ಗುತ್ತಿಗೆ ಪಡೆದ ಕಂಪನಿಯಿಂದ ಇದುವರೆಗೆ 40 ಬಸ್‌ ಗಳು ಪೂರೈಕೆಯಾಗಿವೆ. ಇವುಗಳ ನಿಯೋಜನೆಗಾಗಿ ಬೆಂಗಳೂರು ಸ್ಮಾರ್ಟ್‌ಸಿಟಿಯಿಂದ ಇದಕ್ಕಾಗಿ 50 ಕೋಟಿ ಅನುದಾನ ಒದಗಿಸಲಾಗಿದೆ. ಈ ಬಸ್‌ಗಳು ನಿತ್ಯ 180 ಕಿ.ಮೀ. ಕಾರ್ಯಾಚರಣೆಗೆ ಪ್ರತಿ ಕಿ.ಮೀ.ಗೆ ವಿದ್ಯುತ್ಛಕ್ತಿಯೂ ಒಳಗೊಂಡಂತೆ ಬಿಎಂಟಿಸಿಯು 51.67 ರೂ. ಪಾವತಿಸುತ್ತದೆ. ಸದ್ಯ ಕೆಂಗೇರಿ ಘಟಕದಿಂದ ಈ ಬಸ್‌ಗಳುಕಾರ್ಯಾಚರಣೆಯನ್ನೂ ಮಾಡುತ್ತಿವೆ. ಆದರೆ, ಎಷ್ಟೇ ಕಸರತ್ತು ಮಾಡಿದರೂ ಪ್ರತಿ ಬಸ್‌ ದಿನಕ್ಕೆ 180 ಕಿ.ಮೀ. ಕಾರ್ಯಾಚರಣೆಮಾಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಪ್ರಯಾಣಿಕರ ಸಂಖ್ಯೆಯೂಇನ್ನೂ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಪರಿಣಾಮ ಈ ಬಸ್‌ಗಳು ತರುವಆದಾಯಕ್ಕಿಂತ ಇವುಗಳಿಗೆ ಪಾವತಿಸುವ ಮೊತ್ತ ಹೆಚ್ಚಾಗಿದೆ ಇದು ಬಿಎಂಟಿಸಿ ಅಧಿಕಾರಿಗಳ ನಿದ್ದೆಗೆಡಿಸಿದೆ.

ಸ್ಪಷ್ಟ ಚಿತ್ರಣಕ್ಕೆ 2 ತಿಂಗಳು ಬೇಕು: ಲೆಕ್ಕಾಚಾರದ ಪ್ರಕಾರ 1 ಕಿ.ಮೀ.ಗೆ 51.67 ರೂ.ಗಳಂತೆ 180 ಕಿ.ಮೀ.ಗೆ 9,300 ರೂ. ಆಗುತ್ತದೆ.ಇದನ್ನು ಸಂಸ್ಥೆಯೇ ಭರಿಸಬೇಕು. ಪ್ರಸ್ತುತ ನಿರೀಕ್ಷಿತ ಆದಾಯ ಬಾರದಿರಲು ಸಕಾರಣವೂ ಇದೆ. ಪ್ರಸ್ತುತ ಕೋವಿಡ್‌ ಮೂರನೇ ಅಲೆಶುರುವಾಗಿದ್ದು, ಎಲೆಕ್ಟ್ರಾನಿಕ್‌ ಸಿಟಿ ಸೇರಿದಂತೆ ಬಹುತೇಕ ಕಂಪನಿಗಳುವರ್ಕ್‌ ಫ್ರಂ ಹೋಂ ವ್ಯವಸ್ಥೆಯಲ್ಲೇ ಕೆಲಸ ಮಾಡುತ್ತಿವೆ. ಇನ್ನು ಬಸ್‌ ಗಳು ರಸ್ತೆಗಿಳಿದು ಈಗಷ್ಟೇ ಹದಿನೈದು ದಿನಗಳಾಗಿದ್ದು, ಇದರ ಸಾಧಕ-ಬಾಧಕಗಳನ್ನು ತಿಳಿಯಲು ಸಮಯ ಬೇಕಾಗುತ್ತದೆ. ಹೊರಗಡೆಯಿಂದ ಈ ಬಸ್‌ ವೋಲ್ವೋ ತರಹ ಕಾಣಿಸುವುದರಿಂದ ಪ್ರಯಾಣಿಕರು, ಇದು ದುಬಾರಿ ದರದ ಬಸ್‌ ಎಂದು ಹಿಂದೇಟು ಹಾಕುವುದೂ ಉಂಟು. ನಗರದ ಸಂಚಾರದಟ್ಟಣೆ ಕೂಡ ಇದ್ದು, ಚಾಲಕರು ಕಂಪನಿಯಿಂದ ನಿಯೋಜನೆಗೊಂಡವರಾಗಿದ್ದಾರೆ.


Spread the love

About Laxminews 24x7

Check Also

ಜೂನ್ 22 ರಂದು ಸೂರ್ಯ ನಮಸ್ಕಾರ ಮ್ಯಾರಾಥಾನ್…

Spread the loveಜೂನ್ 22 ರಂದು ಸೂರ್ಯ ನಮಸ್ಕಾರ ಮ್ಯಾರಾಥಾನ್… ಸನಾತನ ಸಂಸ್ಕೃತಿ ಏವಂ ಯೋಗ ಸೇವಾ ಸಂಘದಿಂದ ಬೆಳಗಾವಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ