ಬಾಗಲಕೋಟೆ: ಈ ದೇವಸ್ಥಾನದಲ್ಲಿನ ರಥೋತ್ಸವ ಇತಿಹಾಸದಲ್ಲಿ ಎಂದೂ ರದ್ದಾದ ಉದಾಹರಣೆಯೇ ಇಲ್ಲ. ಆದರೆ ಇಂದು ರಥೋತ್ಸವ ನಡೆಯುತ್ತದೆಯೇ ಇಲ್ಲವೇ ಎಂಬುದು ಭಾರಿ ಕುತೂಹಲ ಕೆರಳಿಸಿದೆ. ಏಕೆಂದರೆ ಭಕ್ತರು ರಥೋತ್ಸವ ನೆರವೇರಿಸಲು ಕಂಕಣ ತೊಟ್ಟಿದ್ದರೆ, ಅತ್ತ ಪೊಲೀಸರು ಉತ್ಸವ ತಡೆಯಲು ರಣೋತ್ಸಾಹದಿಂದ ಕಾಯುತ್ತಿದ್ದಾರೆ.
ಹೌದು.. ಇಂಥದ್ದೊಂದು ಸನ್ನಿವೇಶ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿಯಲ್ಲಿ ಸೃಷ್ಟಿಯಾಗಿದೆ. ಇಲ್ಲಿನ ಐತಿಹಾಸಿಕ ಬನಶಂಕರಿ ದೇವಸ್ಥಾನದ ರಥೋತ್ಸವ ನಡೆಯಬೇಕಿದೆ. ಆದರೆ ರಥೋತ್ಸವ ಜಾಗದ ಎಲ್ಲ ರಸ್ತೆಗಳಲ್ಲೂ ಪೊಲೀಸರು ಸರ್ಪಗಾವಲು ಹಾಕಲಾಗಿದೆ.
ಈ ಸಲ ಕರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಲ್ಲಿನ ರಥೋತ್ಸವ ರದ್ದು ಮಾಡಿದೆ. ಆದರೆ ಇಲ್ಲಿನ ರಥೋತ್ಸವ ಎಂದೂ ರದ್ದಾದ ಉದಾಹರಣೆಯೇ ಇಲ್ಲ. ಇಲ್ಲಿನ ರಥ ಎಳೆಯುವ ಹಗ್ಗ ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿಯಿಂದ ಬರಬೇಕಿದ್ದು, ತೇರನ್ನು ಎಳೆಯಲು ಸಾವಿರಾರು ಭಕ್ತರು ಅಲ್ಲಲ್ಲಿ ಚದುರಿ ನಿಂತಿದ್ದಾರೆ.
Laxmi News 24×7