Breaking News

ರಾಜ್ಯದಲ್ಲಿ ಮನೆ-ಮನೆಗಳಲ್ಲಿ ಜನ ಶೀತ, ನೆಗಡಿ, ಕೆಮ್ಮು, ಮೈ ಕೈ ನೋವು, ಜ್ವರ

Spread the love

ರಾಜ್ಯದಲ್ಲಿ ಮನೆ-ಮನೆಗಳಲ್ಲಿ ಜನ ಶೀತ, ನೆಗಡಿ, ಕೆಮ್ಮು, ಮೈ ಕೈ ನೋವು, ಜ್ವರದಿಂದ ಬಳಲುತ್ತಿದ್ದಾರೆ. ಹವಾಮಾನ ಬದಲಾವಣೆಯಿಂದ ಉಂಟಾಗಿರುವ ಈ ಸಮಸ್ಯೆಗೂ ಕೋವಿಡ್‌ ಲಕ್ಷಣಗಳಿಗೂ ಸಾಮ್ಯತೆ ಇರುವುದರಿಂದ ಕೆಲವರು ಆತಂಕಪಡುವುದು ಕಂಡುಬರುತ್ತಿದೆ. ಆದರೆ, ಎಲ್ಲ ಜ್ವರ, ಗಂಟಲು ನೋವುಗಳು ಕೋವಿಡ್‌ ಅಲ್ಲ. ಹೆಚ್ಚಿನವು ಸಾಮಾನ್ಯ ಶೀತ, ಜ್ವರವೇ ಆಗಿರುತ್ತದೆ. ಹಾಗಾಗಿ ಯಾರೂ ಆತಂಕಪಡಬೇಕಾಗಿಲ್ಲಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

”ಶೀತ, ಕೆಮ್ಮು, ಮೈಕೈ ನೋವು ಕಾಣಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. 10ರಲ್ಲಿ ಏಳು ಜನರಿಗೆ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಇದು ಕೋವಿಡ್‌ನ ಸೌಮ್ಯ ಲಕ್ಷಣಗಳಾಗಿದ್ದು. ಕೋವಿಡ್‌ ಸಂಪರ್ಕಿತರ ಸಂಪರ್ಕಕ್ಕೆ ಬಾರದವರಲ್ಲೂ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕೆಲವರು ಪರೀಕ್ಷೆ ಮಾಡಿಸುತ್ತಾರೆ, ಇನ್ನೂ ಕೆಲವರು ಪರೀಕ್ಷೆ ಮಾಡಿಸುವುದಿಲ್ಲ. ಪರೀಕ್ಷೆ ಮಾಡಿಸಿದ್ದರೆ ಬಹುತೇಕರಿಗೆ ಪಾಸಿಟಿವ್‌ ಲಕ್ಷಣಗಳಿವೆ. ಈ ರೀತಿಯ ಲಕ್ಷಣ ಇರುವವರಿಗೆ ಸಾಮಾನ್ಯವಾಗಿ ಶೀತ, ಕೆಮ್ಮಿಗೆ ನೀಡುವ ಮಾತ್ರೆ, ಔಷಧ ನೀಡಲಾಗುತ್ತದೆ. ಇವರು ಮೂರ್ನಾಲ್ಕು ದಿನಗಳಲ್ಲಿ ಗುಣಮುಖರಾಗುತ್ತಾರೆ,” ಎನ್ನುತ್ತಾರೆ ಕಿಮ್ಸ್‌ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಕೆ.ಪಿ. ಬಾಲರಾಜ್‌.

”ಹೆಚ್ಚಿನವರು ಕೋವಿಡ್‌ ಎರಡೂ ಡೋಸ್‌ ಲಸಿಕೆ ಪಡೆದಿರುವುದರಿಂದ ಸೋಂಕು ಉಲ್ಬಣಗೊಳ್ಳುತ್ತಿಲ್ಲ. ಈ ರೀತಿಯ ಲಕ್ಷಣವುಳ್ಳ ಬಹಳಷ್ಟು ಜನರಿಗೆ ಸಾಮಾನ್ಯ ನೆಗಡಿ, ಕೆಮ್ಮಿಗೆ ನೀಡುವ ಔಷಧ ಪಡೆದುಕೊಂಡ ಕೂಡಲೇ ಕಡಿಮೆಯಾಗುತ್ತದೆ. ಆದ್ದರಿಂದ ಹೆಚ್ಚಿನವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು ಎನ್ನುವುದರೊಳಗೆ ಗುಣಮುಖರಾಗುತ್ತಿದ್ದಾರೆ,” ಎಂದು ಅವರು ಹೇಳಿದರು.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ