Breaking News

ಆನ್‌ಲೈನ್ ಶಿಕ್ಷಣ ಸರಿಯಲ್ಲ.: ಬಸವರಾಜ ಹೊರಟ್ಟಿ

Spread the love

ಬೆಂಗಳೂರು: ಆನ್‌ಲೈನ್ ಶಿಕ್ಷಣ ಸರಿಯಲ್ಲ. ಆನ್‌ಲೈನ್ ಶಿಕ್ಷಣ ನಗರ ಪ್ರದೇಶಗಳಿಗೆ ಸೂಕ್ತವಾಗುತ್ತೆ.

ಗ್ರಾಮೀಣ ಭಾಗದ ಮಕ್ಕಳಿಗೆ ಇದರಿಂದ ಅನುಕೂಲವಿಲ್ಲ. ನೆಟ್‌ವರ್ಕ್ ಸಮಸ್ಯೆ, ವಿದ್ಯುತ್ ಇರಲ್ಲ, ಮೊಬೈಲ್ ಇರಲ್ಲ. ಹೀಗೆ ಹಲವು ಸಮಸ್ಯೆಗಳು ಇರುವುದರಿಂದ ಸರಿಯಾಗಲ್ಲ. ಆನ್‌ಲೈನ್ ಕ್ಲಾಸ್‌ನಿಂದ ಶ್ರೀಮಂತ ಮಕ್ಕಳು ಕಲಿಯುತ್ತಾರೆ. ಬಡವರ ಮಕ್ಕಳು ಕಲಿಕೆಯಿಂದ ದೂರ ಉಳಿಯುತ್ತಾರೆ ಎಂದು ಬೆಂಗಳೂರಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಶನಿವಾರ ಹೇಳಿಕೆ ನೀಡಿದ್ದಾರೆ.

ಕೆಲ ಜಿಲ್ಲೆಗಳಲ್ಲಿ 1ರಿಂದ 9ನೇ ತರಗತಿವರೆಗೆ ರಜೆ ಹಿನ್ನೆಲೆ ರಜೆ ನೀಡಿರುವುದಕ್ಕೆ ಕೂಡ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಈಗಿನ ಕೊರೊನಾ ವೈರಸ್ ಬಹಳ ಗಂಭೀರವಾಗಿಲ್ಲ. ಶಾಲೆಗಳಿಗೆ ಬಿಡುವು ಕೊಟ್ಟರೆ ಮಕ್ಕಳ ಬದುಕು‌ ಹಾಳಾಗುತ್ತೆ ಎಂದು ಅಂತರ ಕಾಪಾಡಿಕೊಂಡು ಶಾಲೆ ನಡೆಸಲು ಹೊರಟ್ಟಿ ಸಲಹೆ ನೀಡಿದ್ದಾರೆ. 1ರಿಂದ 5ನೇ ತರಗತಿವರೆಗೆ ಬೇಕಾದರೆ ಶಾಲೆ ಬಂದ್ ಮಾಡಿ ಎಂದು 6ನೇ ತರಗತಿಯಿಂದ ಶಾಲೆ ಪ್ರಾರಂಭ ಮಾಡಲು ಸಲಹೆ ಕೊಟ್ಟಿದ್ದಾರೆ. ವಿದ್ಯಾಗಮ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಶ್ರೀರಾಮುಲುಗೂ ವಿಜಯೇಂದ್ರ ಮುಂದುವರಿಯುವುದು ಬೇಕಿಲ್ಲ, ಅದನ್ನು ಚಾಣಾಕ್ಷತೆಯಿಂದ ಹೇಳುತ್ತಾರೆ!

Spread the loveಕೋಲಾರ: ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರಿಗೂ ಬಿವೈ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷನಾಗಿ ಮುಂದುವರಿಯುವುದು ಬೇಕಿಲ್ಲ, ಅದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ