ಸರ್ಕಾರಿ ಶಾಲೆಯಲ್ಲಿ ಕಲಿತು ಸತತ ಮೂರು ಹುದ್ದೆಗೆ ಆಯ್ಕೆಯಾಗುವ ಮೂಲಕ ಖಾಸಗಿ ಶಾಲೆಗಳಿಗೆ ಮಾದರಿಯಾದ ಅಲಖನೂರ ಗ್ರಾಮದ ರೈತನ ಮಗಳು ಮಂಜುಳಾ ನಿಲಜಗಿ
ಹೌದು ರಾಯಬಾಗ ತಾಲೂಕಿನ ಅಲಖನೂರ ಸದಾಶಿವ ನಗರದ ಒಬ್ಬ ಯುವತಿ ತಂದೆ ತಾಯಿ ಅನಕ್ಷರಸ್ಥರಿದ್ದರು ಶಿಕ್ಷಕರ ಹಾಗೂ ತಂದೆತಾಯಿಗಳ ಮಾರ್ಗದರ್ಶನದಲ್ಲಿ ಡಿಆರಎಫ, ಆರಎಫಓ ಹಾಗೂ ಎಸಿಎಫ್ ಹೀಗೆ ತರಬೇತಿ ಮುಗಿಸುವ ಮುನ್ನ ಒಂದರಮೇಲೊಂದು ಸತತ ಮೂರು ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾಳೆ. ಸರ್ಕಾರಿ ಶಾಲೆಯಾದರೇನು, ಖಾಸಗಿ ಶಾಲೆಯಾದರೇನು ಪ್ರಯತ್ನ ಒಂದಿದ್ದರೆ ಸರ್ಕಾರಿ ನೌಕರಿ ಸಾಧಕರ ಸ್ವತ್ತು ಎಂಬುದನ್ನು ಸಾಬೀತು ಮಾಡಿ ತೋರಿಸಿದ ಯುವತಿ ಮಂಜುಳಾ ಸಿದ್ದಪ್ಪಾ ನಿಲಜಿಗಿ ರಾಯಬಾಗ ತಾಲೂಕೀನ ಅಲಖನೂರ ಗ್ರಾಮದ ನಿರ್ಜನ ಪ್ರದೇಶದ ಸದಾಶಿವ ನಗರದ ತೋಟದ ಶಾಲೆಯಲ್ಲಿ ಕೃಷಿ ಅವಲಂಬಿತ ತಂದೆ ತಾಯಿ ಮಗಳು ಸಾಧನೆ ಮಾಡಿದ್ದಾಳೆ. ಹೆಣ್ಣು ಮಕ್ಕಳು ಮುಂದಿನ ಶಿಕ್ಷಣ ಪಡೆಯಲು ಅನಾನುಕೂಲತೆ ಇದ್ದ ಮಂಜುಳಾ ಸಮಯದಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿದ್ದ ಶಾಲೆಯು ಶಿಕ್ಷಕರ ಹಾಗೂ ಶಾಲಾ ಸುಧಾರಣಾ ಮಂಡಳಿಯವರ ಪ್ರಯತ್ನದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಟ್ಟಿದ್ದೆ ಮಂಜುಳಾಳ ಕಲಿಕೆ ಅನುಕೂಲವಾಗಿದೆ.
ಏನೇ ಆಗಲಿ ಸಾಧನೆ ಮಾಡಬೇಕೆನ್ನುವ ಹಂಬಲ ಇದ್ದರೆ ಯಾವುದೇ ಶಾಲೆಯಲ್ಲಿ ಕಲಿತರು, ಬಡತನವಿದ್ದರೂ ಸಾಧನೆ ಮಾಡಬಹುದು ಎಂದು ಮಂಜುಳಾ ಸಿದ್ದಪ್ಪಾ ನಿಲಜಿಗಿ ಅರಣ್ಯ ಇಲಾಖೆ ಸಹಾಯಕ ಆಯುಕ್ತರಾಗಿ ಆಯ್ಕೆಯಾಗಿ ಗ್ರಾಮಕ್ಕೆ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಈ ಸಾಧನೆ ಮಾಡಿದ ಮಂಜುಳಾ ಸಿದ್ದಪ್ಪಾ ನಿಲಜಿಗಿ ಇವರಿಗೆ ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಶಾಲಾ ಸುಧಾರಣಾ ಮಂಡಳಿ, ಶಿಕ್ಷಕರು ಹಾಗೂ ಸಂಬಂಧಿಕರು ಸತ್ಕರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಹನುಮಂತ ಬೆನ್ನಾಡಿ, ಸಿಆರಪಿ ಮಾದರ,ಮಲಕಾರಿ ಪೂಜಾರಿ, ಅಜ್ಜಪ್ಪ ಬಾನಿ, ಶ್ರೀಶೈಲ ಕರಿಗಾರ, ಮುಖ್ಯೋಪಾಧ್ಯಾಯರಾದ ಎ.ಡಿ.ಖಾತೇದಾರ, ಶಿಕ್ಷಕರಾದ ಮುಲ್ಲಾ, ಪ್ರಕಾಶ್ ಪೂಜಾರಿ ಇದ್ದರು.
ಕಾರ್ಯಕ್ರಮದ ನಿರೂಪಣೆ ಉಮಾದೇವಿ ಬೋಳೆತ್ತಿನ, ಪ್ರಾರ್ಥಣೆ ಮಹಾಲಕ್ಷ್ಮಿ ದಡ್ಡಿಮನಿ, ಸ್ವಾಗತ ಚೌಗಲಾ, ಪರಿಚಯ ಬಿ.ಕೆ.ದೇವಾನಂದ ಮಾಡಿದರು.
ವರದಿ.ಮಹಾದೇವ ಕಾಂಬಳೆ ರಾಯಬಾಗ