Breaking News

ಲಿಫ್ಟ್‌ನಲ್ಲೇ ಶವ- ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ

Spread the love

ಗದಗ: ಇಲ್ಲಿನ ಜಿಮ್ಸ್ ಆಸ್ಪತ್ರೆ ಸದಾ ವಿವಾದಗಳಿಗೆ ಕಾರಣವಾಗುತ್ತಿದೆ. ಇದೀಗ ಸಿಬ್ಬಂದಿ ಶವವನ್ನು ಲಿಫ್ಟ್ ನಲ್ಲೇ ಬಿಟ್ಟು ಹೋಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಆಸ್ಪತ್ರೆಯ ಲಿಪ್ಟ್‍ನಲ್ಲಿಯೇ ಶವ ಬಿಡುವುದು, ಐಸಿಯು ಬೆಡ್‍ಗಾಗಿ ರೋಗಿಗಳು ಪರದಾಡುವುದು ಜಿಮ್ಸ್ ನಲ್ಲಿ ನಿತ್ಯದ ಕತೆಯಾಗಿದೆ. ಅಂಬುಲೆನ್ಸ್ ಅಸ್ತವ್ಯಸ್ತತೆ ಕಾರಣದಿಂದ ಒಂದು ಕೋವಿಡ್ ಶವವನ್ನು ಬೆಳಗ್ಗೆಯಿಂದ ಸಾಯಂಕಾಲದವರೆಗೆ ಲಿಫ್ಟ್‍ನಲ್ಲೇ ಬಿಡಲಾಗಿತ್ತು ಎನ್ನಲಾಗುತ್ತಿದೆ

ಕನಿಷ್ಠ ಶವಾಗಾರದಲ್ಲೇ ಇಟ್ಟು ಅಂಬುಲೆನ್ಸ್ ಬಂದ ನಂತರ ಸಾಗಿಸಬೇಕಿತ್ತು. ಆದರೆ ಸಿಬ್ಬಂದಿ ಲಿಫ್ಟ್ ನಲ್ಲಿ ಬಿಟ್ಟುಹೋಗಿದ್ದಾರೆ. ಕೊನೆಗೆ ಅಂಬುಲೆನ್ಸ್ ತಡವಾಗಿ ಬಂದ ನಂತರ ಶವಕ್ಕೆ ಲಿಫ್ಟ್‍ನಿಂದ ಮುಕ್ತಿ ಸಿಕ್ಕಿದ್ದು ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಆವರಣದಲ್ಲಿಯೇ ಸಿಬ್ಬಂದಿ ಬಳಸಿ ಬಿಸಾಡಿದ ಹ್ಯಾಂಡ್‍ಗ್ಲೌಸ್, ಮಾಸ್ಕ್ ಮತ್ತು ಇತರ ಪಿಪಿಇ ಕಿಟ್‍ಗಳನ್ನು ಕಾಣಬಹುದಾಗಿದೆ.


Spread the love

About Laxminews 24x7

Check Also

“ರಾಜಣ್ಣ ಹೇಳಿಕೆಗೆ ನಾನು ಉತ್ತರ ನೀಡಲು ಹೋಗುವುದಿಲ್ಲ..:C.M.

Spread the loveಗದಗ: ರಾಜಣ್ಣ ಹೇಳಿಕೆಗೆ ನಾನು ಉತ್ತರ ನೀಡಲು ಹೋಗುವುದಿಲ್ಲ. ನಾನೊಂದು ಹೇಳಿದರೆ ನೀವೇ ಒಂದು ಬರೆಯುತ್ತೀರಿ ಎಂದು ಮುಖ್ಯಮಂತ್ರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ