ಬೆಂಗಳೂರು, ಜ. 13: ಪೊಲೀಸ್ ‘ಸಿಂಗಂ’ ಎಂದು ಕರೆಸಿಕೊಳ್ಳುವ ರವಿ ಡಿ. ಚನ್ನಣ್ಣನವರ್ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳು ಆರೋಪಿಗಳಿಂದ 50 ಲಕ್ಷ ರೂ. ವಸೂಲಿ ಮಾಡಿರುವ ಗಂಭೀರ ಅರೋಪ ಕೇಳಿ ಬಂದಿದೆ. ಈ ಕುರಿತು ಸಂತ್ರಸ್ತ ವ್ಯಕ್ತಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದ ದೂರನ್ನು ತನಿಖೆ ನಡೆಸುವಂತೆ ಒಳಾಡಳಿತ ಇಲಾಖೆಗೆ ಆದೇಶ ಮಾಡಲಾಗಿದೆ.
ಸದ್ಯ ಸಿಐಡಿಯಲ್ಲಿ ಎಸ್ಪಿಯಾಗಿರುವ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್, ಅಂದಿನ ಡಿವೈಎಸ್ಪಿ ಮಹದೇವಪ್ಪ, ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಹಾಗೂ ಇಸ್ಮಾಯಿಲ್ ಹೊಸೂರು ಎಂಬುವರ ವಿರುದ್ಧ ಮಂಜುನಾಥ್ ಎಂಬುವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್‌ಗೆ ದೂರು ನೀಡಿದ್ದರು. ದೂರನ್ನಾಧರಿಸಿ ತನಿಖೆ ನಡೆಸುವಂತೆ ಒಳಾಡಳಿತ ಇಲಾಖೆಗೆ ಆದೇಶಿಸಲಾಗಿದೆ.