Breaking News

ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದ ಹೆಂಡ್ತಿ-ಪ್ರಿಯಕರ.. ಕೆರಳಿದ ಪತಿ ಉರುಳಿಸಿದ ವ್ಯಕ್ತಿಯ ಹೆಣ!

Spread the love

ಬಾಗಲಕೋಟೆ: ತನ್ನ ಹೆಂಡತಿಯೊಂದಿಗೆ ಇನ್ನೊಬ್ಬ ವ್ಯಕ್ತಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ ಶಂಕೆಯ ಮೇಲೆ ಕೆರಳಿದ ಗಂಡ ಕೊಲೆಗಾರನಾಗಿದ್ದಾನೆ. ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು, ಪತಿಯೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಇಳಕಲ್ಲ ತಾಲೂಕಿನ ಚಟ್ನಿಹಾಳ ಗ್ರಾಮದಲ್ಲಿ ನಡೆದಿದೆ.

ಆರೋಪಿ ಪತಿ, ಪತ್ನಿಯ ಪ್ರಿಯಕರನ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಅಲ್ಲಾಸಾಬ್ ನದಾಫ್​ (28) ಕೊಲೆಯಾದ ವ್ಯಕ್ತಿ. ಗ್ಯಾನಪ್ಪ ಪೂಜಾರ ಎಂಬಾತ ಕೊಲೆ ಆರೋಪಿ.

ಗ್ಯಾನಪ್ಪ ತನ್ನ ಪತ್ನಿ ಮೇಲೂ ಹಲ್ಲೆ ಮಾಡಿದ್ದು, ಆಕೆ ಇಳಕಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪತಿ ಇಲ್ಲದಿದ್ದಾಗ ಪ್ರಿಯಕರ ಅಲ್ಲಾಸಾಬ್ ಮನೆಗೆ ಬಂದಿದ್ದು, ಇಬ್ಬರು ಗ್ಯಾನಪ್ಪ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬಳಿಕ ಆತ ಪತ್ನಿ ಹಾಗೂ ಅಲ್ಲಾಸಾಬ್ ಇಬ್ಬರ‌ ಮೇಲೂ ಹಲ್ಲೆ ಮಾಡಿದ್ದಾನೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ