Breaking News

ಫಿರೋಝ್‌ ಪುರ ಭದ್ರತಾ ವೈಫಲ್ಯ: ಎಫ್‌ಐಆರ್‌ ನಲ್ಲಿ ಪ್ರಧಾನಿ ಮೋದಿಯವರ ಉಲ್ಲೇಖವಿಲ್ಲ;

Spread the love

ಹೊಸದಿಲ್ಲಿ, ಜ.9: ಪ್ರಧಾನಿ ನರೇಂದ್ರ ಮೋದಿಯವರು ಜ.5ರಂದು ಪಂಜಾಬಿಗೆ ಭೇಟಿ ನೀಡಿದ್ದ ಸಂದರ್ಭ ಉಂಟಾಗಿತ್ತೆನ್ನಲಾದ ಭದ್ರತಾ ವೈಫಲ್ಯದ ಕುರಿತು ಫಿರೋಝ್ಪುರದ ಕುಲಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ನಲ್ಲಿ ಹಲವಾರು ಲೋಪಗಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

 

ಘಟನೆಯು ಜ.5ರಂದು ನಡೆದಿತ್ತಾದರೂ ಜನರಲ್ ಡೈರಿ ಉಲ್ಲೇಖವನ್ನು ಜ.6ರಂದಷ್ಟೇ ದಾಖಲಿಸಲಾಗಿತ್ತು. ನಂತರ ಇನ್ಸ್ಪೆಕ್ಟರ್ ಬಲಬೀರ್ ಸಿಂಗ್ ಅವರ ದೂರಿನ ಮೇರೆಗೆ ಎಫ್‌ಐಆರ್ ಸಲ್ಲಿಸಲಾಗಿತ್ತು. ಆದರೆ ಎಫ್‌ಐಆರ್ನಲ್ಲಿ ಪ್ರಧಾನಿಯವರ ಬೆಂಗಾವಲು ವಾಹನಗಳನ್ನು ಉಲ್ಲೇಖಿಸಲಾಗಿಲ್ಲ. ತಾನು ಅಪರಾಹ್ನ 2:30 ಮತ್ತು 3ರ ನಡುವೆ ಫಿರೋಝ್ಪುರ-ಮೋಗಾ ರಸ್ತೆಯ ಪ್ಯಾರಿಯಾನಾ ಫ್ಲೈಓವರ್ನಲ್ಲಿ ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದೆ ಎಂದು ಬಲಬೀರ್ ಎಫ್‌ಐಆರ್ನಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ ಅಪರಾಹ್ನ 3:20ರ ವೇಳೆಗೆ ಪ್ರಧಾನಿಯವರು ಬಠಿಂಡಾದಿಂದ ದಿಲ್ಲಿಗೆ ನಿರ್ಗಮಿಸಿದ್ದರು ಎನ್ನುವುದನ್ನು ಉಲ್ಲೇಖಿಸುವುದು ಅಗತ್ಯವಾಗಿತ್ತು. ವರದಿಗಳು ತಿಳಿಸಿರುವಂತೆ ಮೋದಿಯವರ ವಾಹನಗಳ ಸಾಲು ಅಪರಾಹ್ನ 1:15ರಿಂದ 1:35ರವರೆಗೆ ಫ್ಲೈಓವರ್ನಲ್ಲಿ ಸಿಕ್ಕಿಹಾಕಿಕೊಂಡಿತ್ತು.

ಈ ನಡುವೆ 150 ಅಪರಿಚಿತ ವ್ಯಕ್ತಿಗಳನ್ನು ಎಫ್‌ಐಆರ್ನಲ್ಲಿ ಹೆಸರಿಸಿರುವ ಬಲಬೀರ್ ಅವರ ವಿರುದ್ಧ ಐಪಿಸಿಯ 283 ಕಲಮ್ನಡಿ ಪ್ರಕರಣವನ್ನು ದಾಖಲಿಸಿದ್ದಾರೆ. ಕೆಲವು ಅಪರಿಚಿತ ವ್ಯಕ್ತಿಗಳು ಫ್ಲೈಓವರ್ನಲ್ಲಿ ಧರಣಿಯನ್ನು ನಡೆಸುತ್ತಿದ್ದಾರೆ ಮತ್ತು ಅದರಿಂದಾಗಿ ಫಿರೋಜ್ಪುರ ರ್ಯಾಲಿಗೆ ತೆರಳುತ್ತಿದ್ದ ಕೆಲವು ವಾಹನಗಳು ಮತ್ತು ಕೆಲವು ವಿಐಪಿಗಳ ಕಾರುಗಳು ಸಿಕ್ಕಿಹಾಕಿಕೊಂಡಿದ್ದವು ಎನ್ನುವುದು ಬಲಬೀರ್ಗೆ ತಿಳಿದಿತ್ತು ಎಂದು ಎಫ್‌ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ಎಫ್‌ಐಆರ್ನಲ್ಲಿ ಪ್ರಧಾನಿಯವರನ್ನು ಉಲ್ಲೇಖಿಸಲಾಗಿಲ್ಲ. ಐಪಿಸಿ 283ರಡಿ ಕೇವಲ 200 ರೂ.ದಂಡವನ್ನು ವಿಧಿಸಲಾಗುತ್ತದೆ ಮತ್ತು ಆರೋಪಿಗೆ ಜಾಮೀನು ನೀಡಬಹುದಾಗಿದೆ. ಇದು ಪಂಜಾಬ ಸರಕಾರದ ಪಿತೂರಿಯನ್ನು ಬೆಟ್ಟು ಮಾಡುತ್ತಿದೆ ಎಂದು ಹೇಳಿದ ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ ಅವರು, ಪ್ರತಿಭಟನಾಕಾರರ ವೀಡಿಯೊಗಳು ವೈರಲ್ ಆಗಿರುವಾಗ ಮತ್ತು ಅವರು ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡಿರುವಾಗ ಅವರು ಅಪರಿಚಿತರಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ವಿಜಯಪುರ…:ಪಿಪಿಪಿ ವಿರುದ್ಧ ಭುಗಿಲೆದ್ದ ಆಕ್ರೋಶ: ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Spread the love ವಿಜಯಪುರ…:ಪಿಪಿಪಿ ವಿರುದ್ಧ ಭುಗಿಲೆದ್ದ ಆಕ್ರೋಶ: ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ