ಬೆಳಗಾವಿ : ಮೂವರು ಮಕ್ಕಳು ಸೇರಿ ಐವರನ್ನು ಕಚ್ಚಿ ಗಾಯಗೊಳಿಸಿದ ಶ್ವಾನವನ್ನೇ ಸ್ಥಳೀಯರು ಹತ್ಯೆಗೈದಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ಎರಗಿರುವ ನಾಯಿ ತಲೆ, ಕಣ್ಣಿಗೆ ಮನಬಂದಂತೆ ಕಚ್ಚಿದೆ. ಬಳಿಕ ಸ್ಥಳೀಯರ ಮೇಲೂ ನಾಯಿ ದಾಳಿ ಮಾಡಿದೆ. ಕಾಲು, ಕೈ ಗಂಭೀರವಾಗಿ ಕಚ್ಚಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಜಮಾವಣೆಗೊಂಡ ಸ್ಥಳೀಯರು ದೊಣ್ಣೆಯಿಂದ ಹೊಡೆದು ಕೊಲೆಗೈದಿದ್ದಾರೆ.
ಗಾಯಗೊಂಡ ಮಕ್ಕಳು ಹಾಗೂ ವಯಸ್ಕರರನ್ನು ಸ್ಥಳೀಯ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ಘಟಪ್ರಭ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.