ಧಾರವಾಡ: ಹಿರಿಯ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ(63) ಇಂದು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಕಲಾವಿದ ಬಸಲಿಂಗಯ್ಯ, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.
ಜಾನಪದ ಕಲಾವಿದ ಬಸಲಿಂಗಯ್ಯ ಧಾರವಾಡದ ನಿವಾಸಿಯಾಗಿದ್ದರು. ಜಾನಪದ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದರು. ಇವರ ಪತ್ನಿ ವಿಶ್ವೇಶ್ವರಿ ಹಿರೇಮಠ ಕೂಡ ಜಾನಪದ ಕಲಾವಿದೆಯಾಗಿದ್ದು ಜಾನಪದ ಸಂಶೋಧನಾ ಸಂಸ್ಥೆ ಮೂಲಕ ಬಸಲಿಂಗಯ್ಯ ಹಿರೇಮಠ ದಂಪತಿ ಕಲಾ ಸೇವೆ ಮಾಡುತ್ತಿದ್ದರು. ಅಲ್ಲದೇ ಅನೇಕ ಜಾನಪದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಬಸಲಿಂಗಯ್ಯ ಹಿರೇಮಠ ಕೊನೆಯುಸಿರೆಳೆದಿದ್ದು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.