Breaking News

ಐಸಿಯುನಲ್ಲಿ ತಂದೆ ಸಾವು; ಕೊವಿಡ್​ನಿಂದ ಹತ್ತಿರ ಹೋಗದ ಮಗ; ಖ್ಯಾತ ಗಾಯಕನ ಕರುಣಾಜನಕ ಸ್ಥಿತಿ

Spread the love

ಕಳೆದ ಕೆಲವು ದಿನಗಳಿಂದ ವಿಶಾಲ್​ ದದ್ಲಾನಿ ಅವರ ತಂದೆ ಮೋತಿ ದದ್ಲಾನಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಕೊರೊನಾ ವೈರಸ್​ ಕಾರಣದಿಂದ ಜನರು ಎದುರಿಸುತ್ತಿರುವ ಕಷ್ಟ ಒಂದೆರಡಲ್ಲ. ಎಲ್ಲರ ಬದುಕಿನಲ್ಲಿ ಅನಿಶ್ಚಿತತೆ ಆವರಿಸಿದೆ.

ಮುಂದೇನು ಎಂಬ ಗೊಂದಲದಲ್ಲೇ ಕಾಲ ಕಳೆಯುವಂತಾಗಿದೆ. ಕೊವಿಡ್​ (Covid 19) ಸೋಂಕು ತಗುಲಿದರೆ ಆತ್ಮೀಯರಿಂದಲೂ ದೂರ ಇರಬೇಕಾದ ಪರಿಸ್ಥಿತಿ ಬಂದೊದಗುತ್ತಿದೆ. ಪ್ರೀತಿಪಾತ್ರರ ಅಂತಿಮ ಸಂಸ್ಕಾರದಲ್ಲೂ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಬಾಲಿವುಡ್​ನ (Bollywood) ಖ್ಯಾತ ಗಾಯಕ ವಿಶಾಲ್​ ದದ್ಲಾನಿ (Vishal Dadlani) ಅವರಿಗೆ ಅಕ್ಷರಶಃ ಇಂಥ ಸ್ಥಿತಿ ಬಂದಿದೆ. ಅವರ ತಂದೆ ಮೃತರಾಗಿದ್ದಾರೆ. ಆದರೆ ಕೊನೇ ಗಳಿಗೆಯಲ್ಲಿ ಅಪ್ಪನ ಜೊತೆ ಇರಲು ವಿಶಾಲ್​ ದದ್ಲಾನಿ ಅವರಿಗೆ ಸಾಧ್ಯವಾಗಿಲ್ಲ. ಕಳೆದ ಕೆಲವು ದಿನಗಳಿಂದ ಕೊವಿಡ್​ ಪಾಸಿಟಿವ್​ (Corona Positive) ಆಗಿರುವ ಅವರು ತಮ್ಮವರಿಂದಲೇ ದೂರ ಉಳಿದುಕೊಂಡು ನೋವು ಅನುಭವಿಸುತ್ತಿದ್ದಾರೆ.

ಬಾಲಿವುಡ್​ನಲ್ಲಿ ನೂರಾರು ಗೀತೆಗಳನ್ನು ಹಾಡಿ ಫೇಮಸ್​ ಆಗಿದ್ದಾರೆ ವಿಶಾಲ್​ ದದ್ಲಾನಿ. ಶುಕ್ರವಾರ (ಜ.7) ಅವರಿಗೆ ಕೊರೊನಾ ಪಾಸಿಟಿವ್​ ಆಗಿತ್ತು. ಆ ಕಾರಣದಿಂದ ಅವರು ಎಲ್ಲರಿಂದ ಐಸೋಲೇಟ್​ ಆಗಿದ್ದರು. ಕಳೆದ ಕೆಲವು ದಿನಗಳಿಂದ ಅವರ ತಂದೆ ಮೋತಿ ದದ್ಲಾನಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಮೋತಿ ದದ್ಲಾನಿ ನಿಧನರಾಗಿದ್ದಾರೆ. ಅಪ್ಪನ ಕೊನೇ ಕ್ಷಣಗಳಲ್ಲಿ ಜೊತೆಗಿರಲು ವಿಶಾಲ್​ಗೆ ಸಾಧ್ಯವಾಗಿಲ್ಲ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ಕಳೆದ ರಾತ್ರಿ ಅತ್ಯುತ್ತಮ ವ್ಯಕ್ತಿಯನ್ನು ಕಳೆದುಕೊಂಡೆ. ಬದುಕಿನಲ್ಲಿ ಇವರಿಗಿಂತ ಒಳ್ಳೆಯ ತಂದೆಯನ್ನು, ಒಳ್ಳೆಯ ಗುರುವನ್ನು ನಾನು ಬಯಸಲು ಸಾಧ್ಯವಿಲ್ಲ. ನನ್ನಲ್ಲಿ ಇರುವ ಎಲ್ಲ ಒಳ್ಳೆಯತನಗಳು ಅವರ ಪ್ರತಿಬಿಂಬವೇ ಆಗಿದೆ. ಕಳೆದ 3-4 ದಿನಗಳಿಂದ ಅವರು ಐಸಿಯುನಲ್ಲಿ ಇದ್ದರು. ಕೊವಿಡ್​ ಕಾರಣದಿಂದ ನಾನು ನಿನ್ನೆಯಿಂದ ಅವರ ಬಳಿ ಹೋಗಲು ಆಗಿರಲಿಲ್ಲ. ನನ್ನ ತಾಯಿಯ ಅತಿ ಕಷ್ಟದ ಸಂದರ್ಭದಲ್ಲಿ ನಾನು ಅವರೊಂದಿಗೆ ಇರಲಾಗಲಿಲ್ಲ. ಇದು ನ್ಯಾಯವಲ್ಲ. ಅಪ್ಪ ಇಲ್ಲದೇ ಈ ಪ್ರಪಂಚದಲ್ಲಿ ಹೇಗೆ ಬದುಕಬೇಕೋ ತಿಳಿದಿಲ್ಲ. ನಾನು ಸಂಪೂರ್ಣವಾಗಿ ಕಳೆದುಹೋಗಿದ್ದೇನೆ’ ಎಂದು ವಿಶಾಲ್​ ದದ್ಲಾನಿ ಪೋಸ್ಟ್​ ಮಾಡಿದ್ದಾರೆ.

ಖ್ಯಾತ ಗಾಯಕನ ಕರುಣಾಜನಕ ಸ್ಥಿತಿ ಕಂಡು ಎಲ್ಲರೂ ಮರುಕು ವ್ಯಕ್ತಪಡಿಸಿದ್ದಾರೆ. ಅಗಲಿದ ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕಮೆಂಟ್​ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳ ವಲಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿದೆ. ಕಳೆದ ಕೆಲವು ದಿನಗಳಿಂದ ಬಾಲಿವುಡ್​ನ ಅನೇಕರಿಗೆ ಕೊವಿಡ್​ ಪಾಸಿಟಿವ್​ ಆಗಿದೆ.


Spread the love

About Laxminews 24x7

Check Also

ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್…

Spread the love ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್… ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ