ವೈರಲ್ ಆದ ವಿಡಿಯೋ ಆಧಾರದ ಮೇಲೆ, ಥಳಿತಕ್ಕೊಳಗಾದ ವ್ಯಕ್ತಿಯ ಸೋದರ ರೇಹನ್ ದೂರು ನೀಡಿದ್ದಾರೆ. ಪೊಲೀಸರು ಈಗಾಗಲೇ ಇಬ್ಬರು ಬಿಜೆಪಿ ಕಾರ್ಯಕರ್ತರ ಮನೆಯ ಮೇಲೆ ದಾಳಿ ಮಾಡಿದ್ದಾರೆ. ನಾಲ್ವರನ್ನು ಬಂಧಿಸಿದ್ದಾರೆ.ಬಿಜೆಪಿ ಕಾರ್ಯಕರ್ತರು ಸೇರಿ ಯುವಕನಿಗೆ ಮನಬಂದಂತೆ ಥಳಿಸಿ, ತಮ್ಮ ಉಗುಳನ್ನು ನೆಕ್ಕುವಂತೆ ಪೀಡಿಸಿದ್ದಾರೆ.
ಅಷ್ಟೇ ಅಲ್ಲ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಬಲವಂತ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜಾರ್ಖಂಡ್ದ ಧನ್ಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅದೂ ಕೂಡ ಬಿಜೆಪಿ ಸಂಸದ ಪಿ.ಎನ್.ಸಿಂಗ್ ಮತ್ತು ಬಿಜೆಪಿ ಎಂಎಲ್ಎ ರಾಜ್ ಸಿನ್ಹಾ ಸಮ್ಮುಖದಲ್ಲಿಯೇ ಆ ಯುವಕನಿಗೆ ಥಳಿಸಲಾಗಿದೆ ಎಂದೂ ವರದಿಯಾಗಿದೆ. ಪಂಜಾಬ್ನಲ್ಲಿ ಪ್ರಧಾನಿ ಮೋದಿ ಭದ್ರತೆ ಲೋಪವಾಗಿದ್ದನ್ನು ವಿರೋಧಿಸಿ ಧನ್ಬಾದ್ ಜಿಲ್ಲೆಯ ಗಾಂಧಿ ಚೌಕದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿ ಹಾದುಹೋದವನೊಬ್ಬ ಪ್ರಧಾನಿ ಮೋದಿ ಮತ್ತು ಬಿಜೆಪಿ ಜಾರ್ಖಂಡ್ ಮುಖ್ಯಸ್ಥ ದೀಪಕ್ ಪ್ರಕಾಶ್ ವಿರುದ್ಧ ಅಸಂಸದೀಯ, ಅವಹೇಳನಕಾರಿ ಮಾತುಗಳನ್ನಾಡಿದ್ದಾನೆ. ಇದೇ ಕಾರಣಕ್ಕೆ ಸಿಟ್ಟಾದ ಬಿಜೆಪಿ ಕಾರ್ಯಕರ್ತರು ಆತನನ್ನು ಥಳಿಸಿದ್ದಾನೆ ಎಂದು ಸ್ಥಳದಲ್ಲಿದ್ದ ಬಿಜೆಪಿ ನಾಯಕರು ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಈ ಯುವಕ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ಬಿಜೆಪಿ ಕಾರ್ಯಕರ್ತರು ಥಳಿಸುತ್ತಿದ್ದಾಗ ಅಲ್ಲಿಯೇ ಇದ್ದ ಟ್ರಾಫಿಕ್ ಪೊಲೀಸರು ಮೂಕ ಪ್ರೇಕ್ಷಕರಂತೆ ನೋಡುತ್ತ ನಿಂತಿದ್ದರು ಎಂದು ಹೇಳಲಾಗಿದ್ದು, ಆತನಿಗೆ ಹೊಡೆದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಅದನ್ನು ನೋಡಿದ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕೂಡ ಟ್ವೀಟ್ ಮಾಡಿದ್ದಾರೆ. ವಿಡಿಯೋವನ್ನು ಶೇರ್ ಮಾಡಿಕೊಂಡು, ಇಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಹಾಗೇ, ಧನ್ಬಾದ್ ಜಿಲ್ಲಾಧಿಕಾರಿ, ಧನ್ಬಾದ್ ಪೊಲೀಸ್ ಮತ್ತು ಜಾರ್ಖಂಡ ಪೊಲೀಸ್ ಟ್ವಿಟರ್ ಖಾತೆಗಳನ್ನು ಟ್ಯಾಗ್ ಮಾಡಿದ್ದಾರೆ. ಜನರು ಶಾಂತಿಯುತವಾಗಿ ಬದುಕುವ ಈ ಜಾರ್ಖಂಡ್ ರಾಜ್ಯದಲ್ಲಿ ದ್ವೇಷಕ್ಕೆ ಜಾಗವಿಲ್ಲ. ಅದರಲ್ಲೂ ಕೋಮು ಸೌಹಾರ್ದತೆ ಕದಡುವ ಯಾರೇ ಆದರೂ ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.
मुस्लिम युवक को बीच सड़क पर धरना पर बैठे भाजपा कार्यकर्ताओं ने पीटा,सड़क पर थूक कर चाटने को कहा और मुस्लिम युवक से जय श्री राम का नारा जबरन लगवाया गया#झारखंड के धनबाद का मामला। युवक ने ऐसा क्या बोला की भाजपाई पिटाई कर दिए?@HemantSorenJMM@dhanbadpolice
pic.twitter.com/ShbbUUqt7F— Sanjay srivastava #INDIA (@IAm_Sanjaysri) January 7, 2022