ಬೆಳಗಾವಿ ಕೇಂದ್ರ ಬಸ್‍ನಿಲ್ದಾಣದಲ್ಲಿ ಪ್ರಯಾಣಿಕರಿಗಿಂತ ಹೆಚ್ಚು ನಾಯಿಗಳೇ ಕಾಣಿಸುತ್ತಿವೆ. ಇದರಿಂದ ಪ್ರಯಾಣಿಕರು ಪ್ರತಿನಿತ್ಯ ನಾಯಿಗಳ ಭೀತಿಯಲ್ಲಿಯೇ ಓಡಾಡುವ ದುಸ್ಥಿತಿ ಅನುಭವಿಸುತ್ತಿದ್ದಾರೆ.
ಹೌದು ಹಿಂಡು-ಹಿಂಡು ನಾಯಿಗಳು, ಒಂದಲ್ಲ, ಎರಡಲ್ಲ. 50ಕ್ಕೂ ಹೆಚ್ಚು ನಾಯಿಗಳ ದಂಡು ಬೆಳಗಾವಿ ಕೇಂದ್ರ ಬಸ್‍ನಿಲ್ದಾಣದಲ್ಲಿ ಬಿಡು ಬಿಟ್ಟಿದೆ. ಇಲ್ಲಿ ಪ್ರಯಾಣಿಕರಿಗಿಂತ ಹೆಚ್ಚಾಗಿ ನಾಯಿಗಳೇ ಕಾಣಿಸುತ್ತಿವೆ. ಇದೇನು ಜನರ ಬಸ್‍ಸ್ಟಾಂಡೋ ಅಥವಾ ನಾಯಿಗಳ ಬಸ್‍ಸ್ಟಾಂಡೋ ಎಂಬ ಅನುಮಾನ ಮೂಡುವಂತಾಗಿದೆ. ಪ್ರತಿನಿತ್ಯ ವೃದ್ಧರು, ಚಿಕ್ಕಮಕ್ಕಳು, ಮಹಿಳೆಯರು ಬಸ್‍ಸ್ಟಾಂಡ್‍ಗೆ ಬರುತ್ತಾರೆ, ಈ ವೇಳೆ ಅವರ ಮೇಲೆ ನಾಯಿಗಳು ಅಟ್ಯಾಕ್ ಮಾಡುವ ಸಾಧ್ಯತೆಯೂ ಇದೆ. ಇನ್ನು ರಾತ್ರಿ ವೇಳೆಯೂ ಕೂಡ ಇದೇ ರೀತಿ ಬಸ್‍ಸ್ಟಾಂಡ್‍ನ ಮೂಲೆ ಮೂಲೆಯಲ್ಲಿ ಓಡಾಡುತ್ತಿರುತ್ತವೆ. ಇಷ್ಟೇಲ್ಲಾ ನಾಯಿಗಳ ದಂಡು ಇಲ್ಲಿ ಓಡಾಡುತ್ತಿದ್ದರೂ ಸಾರಿಗೆ ಅಧಿಕಾರಿಗಳು ಮಾತ್ರ ಈ ನಾಯಿಗಳನ್ನು ಇಲ್ಲಿಂದ ಓಡಿಸಲು ಯಾವುದೇ ರೀತಿ ಕ್ರಮ ತೆಗೆದುಕೊಳ್ಳದೇ ಮೌನಕ್ಕೆ ಶರಣಾಗಿರುವುದು ಸಧ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ಮೇಲೆಯಾದರೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.