Breaking News

ಇಂದು ಸಂಜೆ Lockdown ಭವಿಷ್ಯ ನಿರ್ಧಾರ ಆಗುತ್ತಾ? ಕೋವಿಡ್ ನಿಯಂತ್ರಣಕ್ಕೆ ತಜ್ಞರ ಸಲಹೆಗಳೇನು?

Spread the love

ರಾಜ್ಯದಲ್ಲಿ ಕೊವೀಡ್-19 (COVID 19), ಓಮೈಕಾನ್ (Omicron Variant) ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಂಜೆ 6:30 ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ನೇತೃತ್ವದಲ್ಲಿ ತಜ್ಞರ ಮಹತ್ವದ ಸಭೆ ನಡೆಯಲಿದೆ. ರಾಜ್ಯದಲ್ಲಿ ಕೊವೀಡ್ ನಿಯಂತ್ರಣಕ್ಕೆ ಮುಖ್ಯಮಂತ್ರಿಗಳು ಶಿಫಾರಸು ‌ಕೇಳಿದ್ದಾರೆ.

ತಜ್ಞರ ಸಮಿತಿ ಪರಿಸ್ಥಿತಿ, ‌ಜಾರಿಗೆ ತರಬೇಕಿರುವ ನಿಯಮಗಳ ಬಗ್ಗೆ ಸಿಎಂ ವರದಿ ಈಗಾಗಲೇ ಒಪ್ಪಿಸಲಾಗಿದೆ. ಸಭೆಯಲ್ಲಿ ಲಾಕ್ ಡೌನ್ (Lockdown) ಭವಿಷ್ಯ ನಿರ್ಧಾರವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇಂದು ಮತ್ತೊಮ್ಮೆ ತಜ್ಞರ ಅಭಿಪ್ರಾಯ ಪಡೆದ ನಂತರ ಗುರುವಾರ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸಲು ಸಿಎಂ ಮುಂದಾಗಲಿದೆ. ಸಂಪುಟ ಸಬೆ ಬಳಿಕ ಸರ್ಕಾರ ಲಾಕ್ ಡೌನ್ ಅಥವಾ ಕಠಿಣ ರೂಲ್ಸ್ ಜಾರಿಯ ಮಾರ್ಗ ಸೂಚಿ ಬಿಡುಗಡೆ ಸಾಧ್ಯತೆ ಇದೆ.

ಕೋವಿಡ್ ನಿಯಂತ್ರಣಕ್ಕೆ ತಜ್ಞರ ಸಲಹೆಗಳೇನು?

> ಸಾರ್ವಜನಿಕ ಸಾರಿಗೆ 50% ಕಾರ್ಯಾಚರಣೆ ಅವಕಾಶ

> ಬಸ್, ಮೆಟ್ರೋದಲ್ಲಿ 50% ಸೀಟು ಮಾತ್ರ ತುಂಬಲು ಅವಕಾಶ

> ಕಾರ್ಖಾನೆಗಳು, ಐಟಿ-ಬಿಟಿ ಕಂಪನಿಗಳಿಗೆ 50% ಕಾರ್ಯಾಚರಣೆ ಅಥವಾ ವರ್ಕ್ ಫ್ರಮ್ ಹೋಂಗೆ ಸೂಚನೆ

> ಸರ್ಕಾರಿ ಕಚೇರಿಗಳು, ಖಾಸಗೀ ಕಚೇರಿಗಳಲ್ಲಿ 50% ಕಾರ್ಯಾಚರಣೆ ಉಳಿದ 50% ವರ್ಕ್ ಫ್ರಮ್ ಹೋಂಗೆ ಸೂಚನೆ

> ಬೆಂಗಳೂರು ನಗರಕ್ಕೆ ಪ್ರತ್ಯೇಕ ಮಾರ್ಗ ಸೂಚಿ ಬಿಡುಗಡೆ ಸಾಧ್ಯತೆ

ಸಿಲಿಕಾನ್ ಸಿಟಿ ಸೆಮಿ ಲಾಕ್ ಡೌನ್ ಮಾಡುವ ಸಾಧ್ಯತೆ

: Lockdown ಅನಿವಾರ್ಯ.. ಕರ್ನಾಟಕ ಲಾಕ್​​ಡೌನ್​ ಬಗ್ಗೆ ಸುಳಿವು ಬಿಟ್ಟುಕೊಟ್ಟ ಮತ್ತೊಬ್ಬ ಸಚಿವರು!

ಬೆಂಗಳೂರು ಸೆಮಿ ಲಾಕ್ ಡೌನ್ ಹೇಗಿರಬಹುದು.!?

> ಸದ್ಯಕ್ಕೆ ಸಂಪೂರ್ಣ ಲಾಕ್ ಡೌನ್ ಮಾಡೋದು ಡೌಟ್

> ಈಗಷ್ಟೇ ಆರ್ಥಿಕ ಚಟುವಟಿಕೆಗಳು ಸುಧಾಕರಣೆ ಆಗ್ತಿದೆ. ಹೀಗಾಗಿ ಕಂಪ್ಲೀಟ್ ಲಾಕ್ ಡೌನ್ ಬದಲಿಗೆ ಸೆಮಿ ಲಾಕ್ ಡೌನ್ ಗೆ ಸಿಎಂ ಒಲವು‌

> ನೈಟ್ ಕರ್ಫ್ಯೂ ವಿಸ್ತರಣೆ ಬಹುತೇಕ ಖಚಿತ

> ಮಾಲ್, ಸಿನಿಮಾ ಹಾಲ್ ಗೆ 50% ಮಾತ್ರ ಅನುಮತಿ

> ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ನಿಷೇಧ

> ಬಾರ್, ಪಬ್, ಹೊಟೇಲ್ 50% ಕಾರ್ಯಾಚರಣೆಗೆ ಅವಕಾಶ ಸಾಧ್ಯತೆ

> ಸಾರ್ವಜನಿಕ ಸಾರಿಗೆ ಬಳಸಲು ಎರಡು ಡೋಸ್ ಕಡ್ಡಾಯ ( ಬಸ್, ಮೆಟ್ರೋ ಬಳಕೆಗೆ)

> ಪಾರ್ಕ್ ಗಳಲ್ಲಿ ವಾಕಿಂಗ್ ಗೆ ಸಮಯ ನಿಗಧಿ ಮಾಡುವ ಸಾಧ್ಯತೆ

> ಮಾರುಕಟ್ಟೆ, ಹಾಪ್ ಕಾಮ್ಸ್ ಗಳಲ್ಲಿ ವ್ಯಾಪಾರಕ್ಕೆ ಸಮಯ ನಿಗಧಿ ಸಾಧ್ಯತೆ

> ಜಿಮ್, ಕ್ರೀಡಾ ಸಂಕೀರ್ಣಗಳಿಗೆ 50% ಕಾರ್ಯಾಚರಣೆಗೆ ಅವಕಾಶ ಸಾಧ್ಯತೆ

: RTPCR: ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ 20 ಬಸ್ ಗಡಿಯಲ್ಲೇ ವಾಪಸ್

ಸಂಪುಟ ಸಭೆಯಲ್ಲಿ ತೀರ್ಮಾನ
ಲಾಕ್ ಡೌನ್ ವಿಚಾರದಲ್ಲಿ ನನ್ನ ಮತ್ತು ಕೆಲ ಸಚಿವರು, ಶಾಸಕರ ಅಭಿಪ್ರಾಯ ಮುಖ್ಯವಲ್ಲ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮೊದಲಾದ ಕಡೆ ಕೊರೋನಾ ಉಲ್ಬಣ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಜ್ಞರ ವರದಿ ಆಧರಿಸಿ ಲಾಕ್ ಡೌನ್ ನಿರ್ಧಾರ ಕೈಗೊಳ್ಳುತ್ತೆ. ಕೋವಿಡ ನಿಯಂತ್ರಣದ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹುಬ್ಬಳ್ಳಿ ತಾಲೂಕಿನ ಹೆಬಸೂರಿನಲ್ಲಿ ಮುನೇನಕೊಪ್ಪ ತಿಳಿಸಿದ್ದಾರೆ.

ಜನರ ಸಹಕಾರ ಅಗತ್ಯ

ಕೋವಿಟ್ ಎಷ್ಟೆಲ್ಲಾ ಹೆಚ್ಚಾಗುತ್ತಿದ್ದರೂ ಬಹಳಷ್ಟು ಜನ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ತಿಲ್ಲ. ಶಾಲಾ ಮಕ್ಕಳಲ್ಲಿಯೂ ಕೋವಿಡ್ ಹೆಚ್ಚಳವಾಗ್ತಿದೆ. ಅನಿವಾರ್ಯವಾದಾಗ ಸರ್ಕಾರ ಒಂದು ತೀರ್ಮಾನ ತೆಗೆದುಕೊಳ್ಳುತ್ತೆ. ನಮ್ಮ ಸರ್ಕಾರ ಸಾಕಷ್ಟು ಕಾಳಜಿ ವಹಿಸಿದೆ. ಎಲ್ಲಿಯೂ ಜವಾಬ್ದಾರಿಯಿಂದ ನುಣುಚಿಕೊಂಡಿಲ್ಲ. ಇದಕ್ಕೆ ಜನ ಹೆಚ್ಚು ಸಹಕಾರ ಕೊಡಬೇಕೆಂದು ಹೊರಟ್ಟಿ ಕರೆ ನೀಡಿದರು.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ