ಹೈದರಾಬಾದ್: ಕೊರೋನಾ ನಿಯಂತ್ರಣ ( Coronavirus Control ) ಕ್ರಮಗಳನ್ನು ಪಾಲಿಸದೇ, ಕೋವಿಡ್ ಪ್ರಕರಣಗಳ ( Covid-19 Case ) ಸಂಖ್ಯೆ ಹೆಚ್ಚಾದಂತ ಸಂದರ್ಭದಲ್ಲಿಯೇ ಪ್ರತಿಭಟನೆಗೆ ಇಳಿದಿದ್ದಂತ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಕಿಡಿಕಾರಿರುವಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ( BJP National President JP Nadda ) ಅವರು, ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ( Telangana Bharatiya Janata Party state president Bandi Sanjay Kumar ) ಬಂಧನ ಪ್ರಜಾಪ್ರಭುತ್ವದ ಕಗ್ಗೊಲೆಯೇ ಸರಿ ಎಂಬುದಾಗಿ ಕಿಡಿಕಾರಿದ್ದಾರೆ.
ಸಂಜಯ್ ಅವರು ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಿಯೇ ಕಾರ್ಯಕರ್ತರೊಂದಿಗೆ ಪ್ರತಿಭಪಟನೆ ನಡೆಸಿದ್ದು, ಹೀಗಿದ್ದೂ ಅವರ ಮೇಲೆ ಲಾಠಿ ಚಾರ್ಜ್ ಮಾಡಿ ಆನಂತ್ರ, ಪೊಲೀಸರು ಬಂಧಿಸಿದ್ದು ಮಾತ್ರ ಸರಿಯಲ್ಲ. ಇದು ಖಂಡನೀಯ ಎಂದಿದ್ದಾರೆ.