Breaking News

ಕರ್ನಾಟಕ-ಮಹಾರಾಷ್ಟ್ರ-ಗೋವಾ ಮಧ್ಯಭಾಗದಲ್ಲಿರುವ ಅಂಬೋಲಿ ಫಾಲ್ಸ್ ಜಲವೈಭವ ನೋಡುಗರ ಕಣ್ಣಿಗೆ ಹಬ್ಬ.

Spread the love

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ-ಗೋವಾ ಮಧ್ಯಭಾಗದಲ್ಲಿರುವ ಅಂಬೋಲಿ ಫಾಲ್ಸ್ ಜಲವೈಭವ ನೋಡುಗರ ಕಣ್ಣಿಗೆ ಹಬ್ಬ. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆ ಸಾವಂತವಾಡಿ ತಾಲೂಕಿನ ಅಂಬೋಲಿಯಲ್ಲಿರುವ ಈ ಜಲಪಾತ ಕಿಂಗಡಮ್ ಆಫ್ ಫಾಲ್ಸ್ ಅಂತಾನೇ ಫೇಮಸ್.

ವರ್ಷಧಾರೆಗೆ ಮೈದುಂಬಿರುವ ಈ ಜಲಧಾರೆ ಪ್ರತಿವರ್ಷ ಪ್ರವಾಸಿಗರನ್ನು ಹರ್ಷದ ಹೊನಲಿನಲ್ಲಿ ಮಿಂದೇಳಿಸುತ್ತಿತ್ತು. ಆದರೆ ಈ ಬಾರಿ ಮಾತ್ರ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಈ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶವಿಲ್ಲ. ಆದರೆ ಈ ಮಾರ್ಗವಾಗಿ ಸಂಚರಿಸುವ ಜನರು ಕೆಲವು ಕ್ಷಣಗಳ ಕಾಲ ಈ ಪ್ರದೇಶದಲ್ಲಿ ನಿಂತು ತೆರಳುತ್ತಿದ್ದಾರೆ.

ಅಂಬೋಲಿಯಲ್ಲಿರುವ ಈ ಜಲಪಾತಗಳ ಸ್ವರ್ಗವಷ್ಟೇ ಅಲ್ಲ ಬೆಟ್ಟದ ಮೇಲೆ ಆವರಿಸುವ ದಟ್ಟ ಮಂಜು ಸಹ ನೋಡುಗರ ಕಣ್ಮನ ಸೆಳೆಯುತ್ತದೆ. ಸಹ್ಯಾದ್ರಿ ಶ್ರೇಣಿಗಳಲ್ಲಿರುವ ಈ ಅಂಬೋಲಿ ಕಣಿವೆಯಲ್ಲಿ ಸಾಗುತ್ತಿದ್ದರೆ ಆ ಮಂಜಿನ ಚಿತ್ತಾರ, ಬೆಟ್ಟಗಳ ಸಾಲಿನಲ್ಲಿ ಜಲಪಾತದ ಹರ್ಷೋದ್ಘಾರ ಈ ಸುಂದರ ದೃಶ್ಯಕಾವ್ಯವನ್ನು ಬಣ್ಣಿಸಲು ಪದಗಳೇ ಸಾಲದು. ಇದಷ್ಟೇ ಅಲ್ಲದೇ ಈ ಅಂಬೋಲಿ ಕಣಿವೆಗಳಲ್ಲಿ ಸಾಕಷ್ಟು ಮಂಗಗಳು ಸಹ ವಾಸವಿವೆ. ಪ್ರತಿ ವರ್ಷ ಇಲ್ಲಿ ಆಗಮಿಸುತ್ತಿದ್ದ ಸಹಸ್ರಾರು ಪ್ರವಾಸಿಗರು ಈ ಮಂಗಗಳಿಗೆ ಆಹಾರ ನೀಡುತ್ತಿದ್ದರು

ಯಾವುದಾದರೂ ವಾಹನ ಈ ಮಾರ್ಗವಾಗಿ ಪಾಸ್ ಆದ್ರೆ ಸಾಕು ಯಾರಾದರೂ ಏನಾದರೂ ಕೊಡ್ತಾರಾ ಅಂತ ಈ ಮಂಗಗಳು ವಾಹನದತ್ತ ಧಾವಿಸುತ್ತವೆ. ಕಳೆದ 15 ದಿನಗಳಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನದಿ ಅಂಚಿನ ಗ್ರಾಮಗಳಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದರೆ, ಮತ್ತೊಂದೆಡೆ ಜಲಪಾತಗಳಲ್ಲಿ ಜಲವೈಭವವೇ ಸೃಷ್ಟಿಯಾಗಿದೆ. ಆದರೆ ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಜಲಪಾತಗಳ ವೀಕ್ಷಣೆ ಹಾಗೂ ಪ್ರಕೃತಿ ವೈಭವ ಕಣ್ತುಂಬಿಕೊಳ್ಳಲು ಈ ಬಾರಿ ಸಾಧ್ಯವಾಗುತ್ತಿಲ್ಲ.


Spread the love

About Laxminews 24x7

Check Also

ಚಿಕ್ಕೋಡಿಯಲ್ಲಿ ಸರಣಿ ಕಳ್ಳತನ, ಕಾ‌ರ್ ಹಾಗೂ ಮನೆಗಳ್ಳತನ ಮಾಡಿ ಕಳ್ಳರು ಪರಾರಿ

Spread the love ಚಿಕ್ಕೋಡಿಯಲ್ಲಿ ಸರಣಿ ಕಳ್ಳತನ, ಕಾ‌ರ್ ಹಾಗೂ ಮನೆಗಳ್ಳತನ ಮಾಡಿ ಕಳ್ಳರು ಪರಾರಿ ಚಿಕ್ಕೋಡಿ: ಒಂದು ಮನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ