ಸಂತೋಷ್ ಜಾರಕಿಹೊಳಿ ಅವರು ಸುಮಾರು ಎರಡು ವರ್ಷ ವಾಯಿತು ಸತತವಾಗಿ ಪ್ರತಿ ಶನಿವಾರ ಗೋಕಾಕ ,ಸವದತ್ತಿ ,ಯರಗಟ್ಟಿ, ಹಾಗೂ ಸುತ್ತಮುತ್ತಲಿನ ಹಳ್ಳಿ ಹಳ್ಳಿಗೆ ತೆರಳಿ ಪ್ರತಿ ಶನಿವಾರ ಒಂದೊಂದು ಗ್ರಾಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ.
ಇಂದು ಐವತ್ತನೇ ವಾರದ ಅನ್ನ ಸಂತರ್ಪಣೆ ಕಾರ್ಯಕ್ರಮ ವನ್ನಾ ಬಾಗಲಕೋಟೆ ಜಿಲ್ಲೆಯ ಸುಪ್ರಸಿದ್ದ ಆಂಜನೇಯ ಸ್ವಾಮಿ ದೇವಾಲಯ ದಲ್ಲಿ ಹಮ್ಮಿ ಕೊಂಡಿದ್ದ ಅವರು ಇಲ್ಲಿಯೂ ಕೂಡ ಸುಮಾರು ಜನಾ ಭಕ್ತಾದಿಗಳು ಪ್ರಸಾದ ಸ್ವೀಕಾರ ಮಾಡಿದ್ದಾರೆ.
ಅವರ ಮಗ ಶ್ರೀ ಸೂರ್ಯ ಶ್ರೇಷ್ಠ ಜಾರಕಿಹೊಳಿ ಅವರ ಜನನದ ನಂತರ ಈ ಒಂದು ಉತ್ತಮ ಕಾರ್ಯಕ್ಕೆ ಕೈ ಹಾಕಿದ ಸಾಹು ಕಾರ ಶ್ರೀ ಸಂತೋಷ್ ಜಾರಕಿಹೊಳಿ ಅವರು ಪ್ರತಿ ಶನಿವಾರ ತಪ್ಪದಂತೆ ಸತತ 50ನೆಯ ವಾರದ ವರೆಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ.
ಇನ್ನು ಇದಕ್ಕೆ ಅವರ್ ಅಭಿಮಾನಿ ಬಳಗ ಹಾಗೂ ಸಹೋದ್ಯೋಗಿ ಗಳ ಬೆಂಬಲ ಕೂಡ ಇದೆ ಇಲ್ಲಿಯ ವರೆಗೂ ಎಲ್ಲಿಯೂ ಜಾಸ್ತಿ ಪ್ರಚಾರಕ್ಕೆ ಬಾರದೆ ತಮ್ಮ ಪಾಡಿಗೆ ತಾವು ಜನರಿಗೆ ಅನ್ನ ಸಂತರ್ಪಣೆ ಮಾಡುವ ಕೆಲಸ ಮಾಡುತ್ತಾ ಬಂದಿದ್ದಾರೆ.
ಸುಮಾರು ಹಳ್ಳಿ ಹಳ್ಳಿಗೆ ತೆರಳಿ ಅನ್ನ ಸಂತರ್ಪಣೆ ಮಾಡಿದ ಈ ಒಂದು ಕೆಲಸಕ್ಕೆ ಜನರಿಂದ ಮೆಚ್ಚುಗೆ ಹಾಗೂ ಪ್ರಶಂಸೆ ಕೂಡ ವ್ಯಕ್ತ ವಾಗುತ್ತದೆ.
ಇನ್ನು ಈ ಒಂದು ಕಾರ್ಯಕ್ರಮದಲ್ಲಿ ಪ್ರತಿ ಹಳ್ಳಿಯ ಹಿರಿಯರು ,ಕಿರಿಯರು,ಎಲ್ಲರುಸೇರಿ ಭಾಗ ವಹಿಸಿ ಅನ್ನ ದಾನಕ್ಕೆ ಪಾತ್ರ ರಾಗಿದ್ದಾರೆ .
ಇದೆ ರೀತಿ ಈ ಒಂದು ಕಾರ್ಯಕ್ರಮ ಸತತವಾಗಿ ಸಾಗಲಿ ಎಂಬುದು ಕೂಡ ಎಲ್ಲರ ಆಶಯ ವಾಗಿದೆ